×
Ad

ವೇತನ ಬಿಡುಗಡೆಗೆ ಆಗ್ರಹಿಸಿ ಅಕ್ಷರ ದಾಸೋಹ ನೌಕರರಿಂದ ಧರಣಿ

Update: 2021-06-23 20:25 IST

ಕುಂದಾಪುರ, ಜೂ.23: ಸರಕಾರದ ಸ್ಕೀಂ ಕೆಲಸಗಾರರಾಗಿರುವ ಅಕ್ಷರ ದಾಸೋಹ ನೌಕರರಿಗೆ ಲಾಕ್‌ಡೌನ್ ಅವಧಿಯಲ್ಲಿ ಪ್ಯಾಕೇಜ್ ಘೋಷಣೆ ಮಾಡದಿರುವುದನ್ನು ಖಂಡಿಸಿ ಹಾಗು ಮೂರು ತಿಂಗಳ ವೇತನ ಬಿಡುಗಡೆಗೆ ಆಗ್ರಹಿಸಿ ಇಂದು ಕುಂದಾಪುರ ತಾಲೂಕಿನಾದ್ಯಂತ ಅಕ್ಷರ ದಾಸೋಹ ನೌಕರರು ಇಂದು ಪ್ರತಿಭಟನೆ ನಡೆಸಿದರು.

ಕುಂದಾಪುರದ ತಾಪಂ ಕಛೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ತಾಲೂಕು ಮುಖಂಡೆ ಸಿಂಗಾರಿ ಮಾತನಾಡಿ, ಜೀವನವಿಡೀ ಈ ದೇಶದ ಮಕ್ಕಳ ಸೇವೆ ಮಾಡುವ ನೌಕರರ ಕೆಲಸಕ್ಕೆ ಗೌರವಯುತ ವೇತನ ನೀಡದೇ ಶೋಷಿಸುತ್ತಿದೆ. ಲಾಕ್‌ಡೌನ್ ಅವಧಿಯಲ್ಲಿ ಸರಕಾರ ಯಾವುದೇ ಪ್ಯಾಕೇಜು ಕೂಡ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರ ಕಳೆದ ಮೂರು ತಿಂಗಳದ ವೇತನವನ್ನು ಕೂಡಲೇ ಖಾತೆಗಳಿಗೆ ಜಮೆ ಮಾಡಬೇಕು. ಕರೋನ ಸಂಕಷ್ಟದಲ್ಲಿರುವ ನೌಕರರಿಗೆ ವೇತನ ಅಗತ್ಯವಿದೆ. ಎಲ್ಲಾ ನೌಕರರಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡಬೇಕು. ನಿವೃತ್ತ್ತಿಯಾಗುವ ನೌಕರರಿಗೆ ಪಿಂಚಣಿ ಜಾರಿ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಕುಂದಾಪುರದ ಸೌಕೂರು, ವಡೇರಹೋಬಳಿ, ಕೊಲ್ಲೂರು, ಮೂಡ್ಲಕಟ್ಟೆ, ಬಡಾಕೆರೆ, ಹಾಲಾಡಿ, ತಲ್ಲೂರು, ಹೆಮ್ಮಾಡಿ, ವಂಡ್ಸೆ ಮುಂತಾದ ಶಾಲೆಗಳಲ್ಲಿ ನೌಕರರು ಪ್ರತಿಭಟನೆ ನಡೆಸಿದರು. ವಿವಿದೆಡೆಯಲ್ಲಿ ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರಾದ ಎಚ್.ನರಸಿಂಹ, ನಾಗರತ್ನ, ನೌಕರರ ಮುಖಂಡ ರಾದ ಉಷಾ, ಶ್ಯಾಮಲ, ಸರೋಜ, ಶ್ರೀಮತಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News