ದ.ಕ.ಜಿಲ್ಲೆ: ಬ್ಲ್ಯಾಕ್ ಫಂಗಸ್ 1 ಪ್ರಕರಣ ಪತ್ತೆ
Update: 2021-06-23 20:28 IST
ಮಂಗಳೂರು, ಜೂ. 23: ದ.ಕ.ಜಿಲ್ಲೆಯಲ್ಲಿ ಬುಧವಾರ ಬ್ಲ್ಯಾಕ್ ಫಂಗಸ್ ನ 1 ಪ್ರಕರಣ ಪತ್ತೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 31 ಸಕ್ರಿಯ ಬ್ಲ್ಯಾಕ್ ಫಂಗಸ್ ಪ್ರಕರಣವಿದ್ದು, ಅದರಲ್ಲಿ ದ.ಕ.ಜಿಲ್ಲೆಯ 8 ಮತ್ತು ಹೊರಜಿಲ್ಲೆಯ 23 ಪ್ರಕರಣ ಸೇರಿವೆ.
ಈವರೆಗೆ ದ.ಕ.ಜಿಲ್ಲೆಯ 4 ಮತ್ತು ಹೊರಜಿಲ್ಲೆಯ 14 ಸಹಿತ 18 ಮಂದಿ ಬ್ಲಾಕ್ ಫಂಗಸ್‌ಗೆ ಬಲಿಯಾಗಿದ್ದಾರೆ. ಅಲ್ಲದೆ ಚಿಕಿತ್ಸೆಯಿಂದ ಗುಣಮುಖರಾಗಿ 31 ಮಂದಿ ಮನೆಗೆ ಮರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.