ಮಕ್ಕಳ ಅಶ್ಲೀಲ ವೀಡಿಯೋ: ಇಬ್ಬರ ವಿರುದ್ಧ ಪ್ರಕರಣ
Update: 2021-06-23 20:37 IST
ಮಂಗಳೂರು, ಜೂ.23: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮಕ್ಕಳ ಅಶ್ಲೀಲ ವೀಡಿಯೋವನ್ನು ಅಂತರ್ಜಾಲಕ್ಕೆ ಅಪ್‌ಲೋಡ್ ಮಾಡಿರುವ ಇಬ್ಬರು ಆರೋಪಿಗಳ ವಿರುದ್ಧ ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಒಂದು ಪ್ರಕರಣವು 2020ರ ಜೂನ್ 27, 28ರಂದು ನಡೆದಿದ್ದರೆ ಇನ್ನೊಂದು ಪ್ರಕರಣವು 2020ರ ಜೂನ್ 4ರಂದು ನಡೆದಿದೆ. ಆರೋಪಿಯು ಮಗುವಿನ ಆಶ್ಲೀಲ ವೀಡಿಯೋ ಅಪ್‌ಲೋಡ್ ಮಾಡಿರುವುದು ಬೆಳಕಿಗೆ ಬಂದಿದೆ.