×
Ad

ಉಡುಪಿ: ಪ್ರಾಕೃತಿಕ ವಿಕೋಪದಡಿ 6.44 ಲಕ್ಷ ರೂ. ಪರಿಹಾರ ವಿತರಣೆ

Update: 2021-06-23 21:13 IST

ಉಡುಪಿ, ಜೂ.23: ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ 14 ಕುಟುಂಬಗಳಿಗೆ ಒಟ್ಟು 6.44 ಲಕ್ಷ ರೂ. ಮೊತ್ತದ ಪರಿಹಾರದ ಚೆಕ್‌ಗಳನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಇಂದು ವಿತರಿಸಿದರು.

ಉಡುಪಿ ತಾಲೂಕು ಕಚೇರಿಯ ಕೋರ್ಟ್ ಹಾಲ್‌ನಲ್ಲಿ ನಡೆದ ಸಮಾರಂಭ ದಲ್ಲಿ ಶಾಸಕರು 76 ಬಡಗಬೆಟ್ಟು ಗ್ರಾಮದ ಮನೋರಂಜಿನಿ ಜತ್ತನ್ ಅವರಿಗೆ 71,625ರೂ., ಮೂಡನಿಡಂಬೂರು ಗ್ರಾಮದ ಬಿ. ದೇವಿಗೆ 61,250 ರೂ., ಕಿದಿಯೂರು ಗ್ರಾಮದ ಲಲಿತಗೆ 20,055ರೂ., ಕಮಲ ಶ್ರೀಯಾನ್‌ಗೆ 31,515 ರೂ., ಕೊಡವೂರು ಗ್ರಾಮದ ರತ್ನ ಆಚಾರ್ತಿಗೆ 60,000ರೂ., ಶಾರದಾಗೆ 40,000ರೂ., ಗೌರಿಗೆ 20,000, ಗಿರಿಜಾ ಗಾಣಿಗರಿಗೆ 45,000, ಬೇಬಿಗೆ 60,000ರೂ.ಗಳ ಚೆಕ್ ವಿತರಿಸಿದರು.

ಅಲ್ಲದೇ ಕೊಡವೂರು ಗ್ರಾಮದ ಪದ್ಮಾವತಿಗೆ 75,000, ಲಕ್ಷ್ಮಿಗೆ 40,000, ಮಾಧವ ಬಂಗೇರಗೆ 40,000, ಅಶೋಕ್ ಕರ್ಕೇರರಿಗೆ 40,000, ಲಲಿತಾ ಜತ್ತನ್‌ರಿಗೆ 40,000ರೂ.ಗಳ ಚೆಕ್ ಸೇರಿದಂತೆ ಒಟ್ಟು 6,44,445 ರೂ ಮೊತ್ತದ ಚೆಕ್ಕನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಆರಾಧನಾ ಸಮಿತಿ ಸದಸ್ಯರಾದ ಜಗದೀಶ್ ಆಚಾರ್ಯ, ಜೀವನ್, ಚಂದ್ರಶೇಖರ್ ನಾಯ್ಕ, ಸುನೀತಾ ಪೈ ಹಾಗೂ ಉಡುಪಿ ತಹಶೀಲ್ದಾ ಪ್ರದೀಪ್ ಕುರ್ಡೆಕರ್, ಉಡುಪಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಮೋಹನ್ ರಾಜ್, ಕಂದಾಯ ನಿರೀಕ್ಷಕ ಉಪೇಂದ್ರ, ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ದೇವಿಪ್ರಸಾದ್, ಗ್ರಾಮ ಲೆಕ್ಕಾಧಿಕಾರಿ ಕಾರ್ತಿಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News