×
Ad

ಬೆಲೆ ಏರಿಕೆ ವಿರುದ್ಧ ಕಾಪುವಿನಲ್ಲಿ ಪ್ರತಿಭಟನೆ

Update: 2021-06-23 21:45 IST

ಕಾಪು: ಅಚ್ಚೇ ದಿನ್‍ಗಳ ಕನಸನ್ನು ಬಿತ್ತಿ ಅಧಿಕಾರಕ್ಕೆ ಬಂದ ಸರಕಾರ ಇಂದು ಈ ರೀತಿ ಜನರನ್ನು ದೋಚುವುದು ಸರಿಯಲ್ಲ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಮಾಜಿ ರಾಜ್ಯ ಕಾರ್ಯದರ್ಶಿ ಅನ್ವರ್ ಅಲಿ ಯವರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ರಾಜ್ಯದ್ಯಂತ  ಪಕ್ಷವು ಹಮ್ಮಿಕೊಂಡ ಕಾರ್ಯಕ್ರಮದ ಪ್ರಕಾರ ಕಾಪು ಹೃದಯ ಭಾಗದಲ್ಲಿ ಪಕ್ಷದ ಕಾರ್ಯಕರ್ತರು ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಮಾತಾಡಿದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಅಧ್ಯಕ್ಷರು ಅಬ್ದುಲ್ ಅಝೀಝ್ ಉದ್ಯಾವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾರುಖ್ ತೀರ್ಥಹಳ್ಳಿ, ರಾಜ್ಯ ಮಾಜಿ ಕಾರ್ಯದರ್ಶಿ ರಿಯಾಜ್ ಕುಕ್ಕಿಕಟ್ಟೆ, ಅಬ್ದುರ್ರಹ್ಮಾನ್ ಉದ್ಯಾವರ, ಮುಹಮ್ಮದ್ ಇಕ್ಬಾಲ್ ಮಜೂರ್, ಮುಹಮ್ಮದ್ ಅಲಿ ಕಾಪು, ಫಾರಿಸ್, ಆರೀಫ್, ಸಾಹಿಲ್, ಅಬ್ದುಲ್ ಸತ್ತಾರ್, ಅಬ್ದುಲ್ ಅಹದ್, ಮುಹಮ್ಮದ್  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News