ಕಡಬ: ಒಂದು ಗೋಣಿ ಅಡಿಕೆ ಕಳವು; ದೂರು
Update: 2021-06-24 10:23 IST
ಕಡಬ, ಜೂ.24. ಮನೆಯಲ್ಲಿರಿಸಿದ್ದ ಅಡಿಕೆ ಚೀಲವನ್ನು ಪರಿಚಿತನೋರ್ವ ಕಳವು ಮಾಡಿದ್ದಾನೆ ಎನ್ನಲಾದ ಘಟನೆ ಠಾಣೆ ವ್ಯಾಪ್ತಿಯ ಹಳೆನೇರಂಕಿ ಎಂಬಲ್ಲಿ ಬುಧವಾರ ನಡೆದಿದೆ.
ಹಳೆ ನೇರಂಕಿ ಗ್ರಾಮದ ಅಲೆಪ್ಪಾಡಿ ನಿವಾಸಿ ಸುಕೇಶ ಎಂಬವರು ತನ್ನ ಮನೆಯ ಅಂಗಳದಲ್ಲಿ ಎರಡು ಗೋಣಿ ಚೀಲಗಳಲ್ಲಿ ಅಡಿಕೆಯನ್ನು ಇರಿಸಿದ್ದರು ಎನ್ನಲಾಗಿದೆ. ಬುಧವಾರ ಮನೆಮಂದಿ ತೋಟಕ್ಕೆ ತೆರಳಿದ್ದ ವೇಳೆ ಪಕ್ಕದ ಮನೆಯ ಪರಮೇಶ್ವರ್ ಎಂಬಾತ ಒಂದು ಗೋಣಿ ಚೀಲ ಅಡಿಕೆಯನ್ನು ಕಳವು ಮಾಡಿರುವುದಾಗಿ ಸುಕೇಶ ಕಡಬ ಠಾಣೆಗೆ ದೂರು ನೀಡಿದ್ದಾರೆ.