ಕಡಂಬು: ಕೊರೋನ ಸೋಂಕಿತ ಕುಟುಂಬಕ್ಕೆ ಎಸ್ ಡಿಪಿಐ ನಿಂದ ನೆರವು

Update: 2021-06-24 11:22 GMT

ವಿಟ್ಲ: ಕೊರೋನ ಸೋಂಕಿಗೆ ಒಳಗಾದ ಕುಟುಂಬಕ್ಕೆ ಗ್ರಾಮ  ಪಂಚಾಯತ್ ಸದಸ್ಯ ಮಹ್ಮೂದ್ ಕಡಂಬು ನೇತೃತ್ವದಲ್ಲಿ ಎಸ್ ಡಿಪಿಐ ಕಡಂಬು ಘಟಕದ ಸದಸ್ಯರು ಅಗತ್ಯ ವಸ್ತುಗಳನ್ನು ಒದಗಿಸುವ ಮೂಲಕ  ನೆರವಾಗಿದ್ದಾರೆ. 

ವಿಟ್ಲ ಪಡ್ನೂರು ಗ್ರಾಮದ 6ನೇ ವಾರ್ಡ್ ನ ಕಡಂಬು-ಬೆದ್ರಕ್ಕಾಡು ಪರಿಸರದಲ್ಲಿ ಕೊರೋನ ಸೋಂಕಿನಿಂದಾಗಿ ಸೀಲ್ ಡೌನ್ ಆಗಿದ್ದ ಮನೆಗಳಿಗೆ ಎಸ್ ಡಿಪಿಐ ಕಡಂಬು ಘಟಕದ ಸದಸ್ಯರು  ದಿನಸಿ  ಕಿಟ್ ಸೇರಿದಂತೆ ತುರ್ತು  ವೈದ್ಯಕೀಯ ಸೇವೆಗಳನ್ನು ಒದಗಿಸುವ ಮೂಲಕ ನೆರವಾದರು.

ಈ ಸಂದರ್ಭದಲ್ಲಿ ಎಸ್ ಡಿಪಿಐ ಕಡಂಬು ಘಟಕದ ಅಧ್ಯಕ್ಷ ಖಾದರ್ ಬೆದ್ರಕ್ಕಾಡು ಹಾಗೂ ಹೈದರ್ ಅಲಿ ಎ.ಬಿ , ಸತ್ತಾರ್, ನವಾಝ್ ಬಿ.ಕೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News