ಪಿಯುಸಿಎಲ್‌ಗೆ ಜಿಲ್ಲಾಧ್ಯಕ್ಷರ ನೇಮಕವಾಗಿಲ್ಲ: ಪ್ರೊ.ರಾಜೇಂದ್ರ ಸ್ಪಷ್ಟನೆ
ಮಂಗಳೂರು, ಜೂ. 24: ಪಿಯುಸಿಎಲ್ (ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್) ದ.ಕ. ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳ ಸಹಿತ ಜಿಲ್ಲಾಧ್ಯಕ್ಷರ ನೇಮಕವಾಗಿಲ್ಲ ಎಂದು ಪಿಯುಸಿಎಲ್‌ನ ರಾಜ್ಯಾಧ್ಯಕ್ಷ ಪ್ರೊ. ರಾಜೇಂದ್ರ ವೈ.ಜೆ. ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯಲ್ಲಿ ಪಿಯುಸಿಎಲ್‌ಗೆ ಸಂಬಂಧಪಟ್ಟಂತೆ ಯಾವುದೇ ಚುನಾವಣೆ ನಡೆದಿಲ್ಲ. ಹಾಗಾಗಿ ಪಿಯುಸಿಎಲ್‌ಗೆ ಜಿಲ್ಲೆಯಲ್ಲಿ ಯಾವುದೇ ಪದಾಧಿಕಾರಿಗಳು ಇಲ್ಲ. ಪಿಯುಸಿಎಲ್‌ನ ಹೆಸರನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದ್ದು, ಕೇಂದ್ರ ಸಮಿತಿಗೆ ವರದಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ನಕಲಿ ಐಡಿ: ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಪಿಯುಸಿಎಲ್‌ಗೆ ದ.ಕ. ಜಿಲ್ಲಾ ಪದಾಧಿಕಾರಿಗಳ ನೇಮಕವಾಗಿಲ್ಲ. ಆರ್. ಈಶ್ವರ್ ರಾಜ್ ಎಂಬಾತ ಪಿಯುಸಿಎಲ್ ಹೆಸರಲ್ಲಿ ನಕಲು ಐಡಿ ಕ್ರಿಯೇಟ್ ಮಾಡಿದ್ದಾನೆ. ಇದನ್ನು ಕೇಂದ್ರ ಸಮಿತಿಯ ಗಮನಕ್ಕೆ ತರಲಾಗು ವುದು. ಆತ ಕಳುಹಿಸುವ ಇ-ಮೇಲ್‌ಗಳನ್ನು ಪರಿಗಣಿಸಬಾರದೆಂದು ಪಿಯುಸಿಎಲ್‌ನ ರಾಷ್ಟ್ರೀಯ ಮಾಜಿ ಉಪಾಧ್ಯಕ್ಷ ಪಿ.ಬಿ. ಡೇಸಾ ಸ್ಪಷ್ಟಪಡಿಸಿದ್ದಾರೆ.