ಉಡುಪಿ: ನಿರುದ್ಯೋಗದಿಂದ ಮನನೊಂದ ಯುವಕ ಆತ್ಮಹತ್ಯೆ
Update: 2021-06-24 18:53 IST
ಉಡುಪಿ, ಜೂ.24:; ಉಡುಪಿ ನಗರದ ಕುಕ್ಕಿಕಟ್ಟೆ - ಇಂದಿರಾನಗರದ ಯುವಕನೋರ್ವ ನಿರುದ್ಯೋಗ ಸಮಸ್ಯೆಯಿಂದ ಮನನೊಂದು ಇಂದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಮೃತ ಯುವಕನನ್ನು ಸ್ಥಳೀಯ ನಿವಾಸಿ ಧನಂಜಯ್ ಎಸ್ (36 ) ಎಂದು ಗುರುತಿಸಲಾಗಿದೆ.
ಇಂದಿರಾನಗರ ಮೊದಲ ತಿರುವು ರಸ್ತೆಯ ನಿವಾಸಿ ಧನಂಜಯ್ ಲಾಕ್ ಡೌನ್ ಸಂದರ್ಭದಲ್ಲಿ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದ ಎನ್ನಲಾಗಿದ್ದು, ಮಾನಸಿಕವಾಗಿ ನೊಂದು ಮನೆ ಸಮೀಪದ ಸರಕಾರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿ ದ್ದಾನೆ. ಶವವನ್ನು ಸ್ಥಳೀಯರ ನೆರವಿನಿಂದ ಪೊಲೀಸರು ಮೇಲಕ್ಕೆತ್ತಿದರು.
ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಸಾಗಿಸಲು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಇಲಾಖೆಗೆ ಉಚಿತ ಅಂಬುಲೆನ್ಸ್ ಸೇವೆ ಒದಗಿಸಿ ಸಹಕರಿಸಿದರು ಎಂದು ತಿಳಿದುಬಂದಿದೆ.
ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.