×
Ad

ಜೂ. 26, 27ರಂದು ಮಂಗಳೂರು ಎಪಿಎಂಸಿ ಬಂದ್

Update: 2021-06-24 19:04 IST

ಮಂಗಳೂರು, ಜೂ.24: ಕೋವಿಡ್-19 ನಿಗ್ರಹದ ಹಿನ್ನೆಲೆಯಲ್ಲಿ ಜೂ. 26ರ ಶನಿವಾರ ಮತ್ತು ಜೂ.27ರ ರವಿವಾರ ದ.ಕ.ಜಿಲ್ಲೆಯಲ್ಲಿ ‘ವಾರಾಂತ್ಯ ಕರ್ಫ್ಯೂ’ ಘೋಷಿಸಿದ ಹಿನ್ನೆಲೆಯಲ್ಲಿ ಮಂಗಳೂರು ಎಪಿಎಂಸಿ ಈ ಎರಡೂ ದಿನವು ಬಂದ್ ಆಗಲಿದೆ ಎಂದು ಎಪಿಎಂಸಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಎರಡು ದಿನ ಬೈಕಂಪಾಡಿಯಲ್ಲಿರುವ ಎಪಿಎಂಸಿ ಪ್ರಾಂಗಣದಲ್ಲಿ ತರಕಾರಿ, ಹಣ್ಣು ಹಂಪಲು ಸಹಿತ ಯಾವುದೇ ವ್ಯಾಪಾರ ವಹಿವಾಟು ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News