×
Ad

ಉಡುಪಿ: ಯಕ್ಷಗಾನ ಕಲಾವಿದರಿಗೆ ಆಹಾರ ಕಿಟ್ ವಿತರಣೆ

Update: 2021-06-24 19:44 IST

ಉಡುಪಿ, ಜೂ. 24: ಹೊನ್ನಾವರ ಹಾಗೂ ಕುಮಟಾ ಪರಿಸರದ ಸುಮಾರು ನೂರು ಮಂದಿ ಯಕ್ಷಗಾನ ಕಲಾವಿದರಿಗೆ ಬೆಂಗಳೂರಿನ ಸರೋಜಿನಿ ದಾಮೋದರನ್ ಫೌಂಡೇಶನ್ ನೀಡಿದ ಆಹಾರದ ಕಿಟ್‌ಗಳೊಂದಿಗೆ ತಲಾ ಐದು ಕಿಲೋ ಅಕ್ಕಿ ಬ್ಯಾಗ್‌ಗಳನ್ನು ಇತ್ತೀಚೆಗೆ ವಿತರಿಸಲಾಯಿತು.

ಉದ್ಯಮಿ-ಸಮಾಜ ಸೇವಕ ಶಿವಾನಿ ಕೃಷ್ಣಮೂರ್ತಿ ಭಟ್ ಇವರು ಹಿರಿಯ ಹಿಮ್ಮೇಳವಾದಕ ಕರ್ಕಿ ಪ್ರಭಾಕರ ಭಂಡಾರಿ ಅವರಿಗೆ ಕಿಟ್ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಲಾವಿದರಾದ ವಿನಯ ಬೇರೊಳ್ಳಿ, ನಾಗೇಶ ಕುಳಿಮನೆ, ಲಕ್ಷ್ಮಣ ನಾಯ್ಕ ಮಂಕಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಿಟ್ ವಿತರಣೆ ಯನ್ನು ವ್ಯವಸ್ಥೆಗೊಳಿಸಿದ ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ಕೃತಜ್ಞತೆ ಸಲ್ಲಿಸಿದರು.

ಬೆಂಗಳೂರಿನ ಸರೋಜಿನಿ ದಾಮೋದರನ್ ಫೌಂಡೇಷನ್ ಕೊರೋನಾ ಸಂಕಷ್ಟದ ಸಮಯದಲ್ಲಿ ಯಕ್ಷಗಾನ ವೃತ್ತಿಪರ ಕಲಾವಿದರಿಗಾಗಿ ತಲಾ ಒಂದು ಸಾವಿರ ರೂ. ಮೊತ್ತದ 250 ಆಹಾರ ಕಿಟ್‌ಗಳನ್ನು ಮೊದಲ ಕಂತಾಗಿ ನೀಡಿದ್ದು, ಇದರಲ್ಲಿ 100 ಕಿಟ್‌ಗಳನ್ನು ಹೊನ್ನಾವರ, ಕುಮಟಾ ಪರಿಸರದ ಕಲಾವಿದರಿಗೆ, 150 ಕಿಟ್‌ಗಳನ್ನು ಕಾಸರಗೋಡು ಪರಿರದ ಕಲಾವಿದರಿಗೆ ನೀಡಲಾಗುತ್ತಿದೆ.

ಬೆಂಗಳೂರಿನ ಸರೋಜಿನಿ ದಾಮೋದರನ್ ಫೌಂಡೇಷನ್ ಕೊರೋನಾ ಸಂಕಷ್ಟದ ಸಮಯದಲ್ಲಿ ಯಕ್ಷಗಾನ ವೃತ್ತಿಪರ ಕಲಾವಿದರಿಗಾಗಿ ತಲಾ ಒಂದು ಸಾವಿರ ರೂ. ಮೊತ್ತದ 250 ಆಹಾರ ಕಿಟ್‌ಗಳನ್ನು ಮೊದಲ ಕಂತಾಗಿ ನೀಡಿದ್ದು, ಇದರಲ್ಲಿ 100 ಕಿಟ್‌ಗಳನ್ನು ಹೊನ್ನಾವರ, ಕುಮಟಾ ಪರಿಸರದ ಕಲಾವಿದರಿಗೆ, 150 ಕಿಟ್‌ಗಳನ್ನು ಕಾಸರಗೋಡು ಪರಿಸರದ ಕಲಾವಿದರಿಗೆ ನೀಡಲಾಗುತ್ತಿದೆ. ಉಳಿದ ಕಲಾವಿದರಿಗೆ ಮುಂದಿನ ದಿನಗಳಲ್ಲಿ ಕಿಟ್ ನೀಡಲಾಗುವುದು ಎಂದು ಮುರಲಿ ಕಡೆಕಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News