ಎಂಐಟಿಯ ಜಂಟಿ ನಿರ್ದೇಶಕರಾಗಿ ಡಾ.ಸೋಮಶೇಖರ್ ಭಟ್ ನೇಮಕ
Update: 2021-06-24 20:01 IST
ಮಣಿಪಾಲ, ಜೂ.24: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನೂತನ ಜಂಟಿ ನಿರ್ದೇಶಕರಾಗಿ ಇಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ಸೋಮಶೇಖರ ಭಟ್ ನೇಮಕ ಗೊಂಡಿದ್ದಾರೆ.
ಈವರೆಗೆ ಸಂಸ್ಥೆಯ ಸಹ ನಿರ್ದೇಶಕ (ಅಭಿವೃದ್ಧಿ)ರಾಗಿ ಕಾರ್ಯನಿರ್ವಹಿಸು ತಿದ್ದ ಡಾ.ಭಟ್, ಕಳೆದ ಆರು ವರ್ಷಗಳಿಂದ ಎಂಐಟಿಯ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತಿದ್ದ ಡಾ.ಬಿ.ಎಚ್.ವಿ.ಪೈ ಅವರಿಂದ ಅಧಿಕಾರ ಸ್ವೀಕರಿಸಿದರು.
ಕಾಪು ತಾಲೂಕಿನ ಸಾಂತೂರು ಗ್ರಾಮದ ಡಾ.ಸೋಮಶೇಖರ ಭಟ್, ನಿಟ್ಟೆಯ ಎನ್‌ಎಂಎಎಂಐಟಿಯಿಂದ 1990ರಲ್ಲಿ ಇಎಂಡ್ಸಿಯಲ್ಲಿ ಬಿ.ಟೆಕ್ ಪದವಿ ಪಡೆದಿದ್ದರು. 1993ರಲ್ಲಿ ಸುರತ್ಕಲ್‌ನ ಕೆಆರ್‌ಇಸಿಯಿಂದ ಇಂಡಸ್ಟ್ರಿಯಲ್ ಇಲೆಕ್ಟ್ರಾನಿಕ್ಸ್‌ನಲ್ಲಿ ಎಂ.ಟೆಕ್ ಹಾಗೂ ಮದರಾಸು ಐಐಟಿಯಿಂದ ಪಿಎಚ್‌ಡಿ ಪದವಿ ಪಡೆದಿದ್ದರು. 1995ರಲ್ಲಿ ಎಂಐಟಿಯಲ್ಲಿ ಪ್ರಾಧ್ಯಾಪಕರಾಗಿ ಸೇರಿದ ಅವರು ಈವರೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿದ್ದರು.