×
Ad

ಸೋಮವಾರದಿಂದ ನಗರದಲ್ಲಿ ನರ್ಮ್ ಬಸ್‌ಗಳ ಸಂಚಾರ: ಕೆಎಸ್ಸಾರ್ಟಿಸಿ ಚಿಂತನೆ

Update: 2021-06-24 21:36 IST

ಉಡುಪಿ, ಜೂ.24: ಈಗ ಉಡುಪಿಯಲ್ಲಿ ಹೆಬ್ರಿ ಭಾಗಗಳಿಗೆ ನರ್ಮ್ ಬಸ್‌ಗಳು ಸಂಚರಿಸುತಿದ್ದು, ಮುಂದಿನ ಸೋಮವಾರದಿಂದ ನಗರದೊಳಗೆ ಹೆಚ್ಚಿನ ಸಂಖ್ಯೆಯಲ್ಲಿ ನರ್ಮ್ ಬಸ್‌ಗಳನ್ನು ಓಡಿಸುವ ಕುರಿತಂತೆ ಕೆಎಸ್ಸಾರ್ಟಿಸಿ ಚಿಂತನೆ ನಡೆಸುತ್ತಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.

ಜಿಲ್ಲೆಯಲ್ಲಿ ಲಾಕ್‌ಡೌನ್ ತೆರವುಗೊಂಡ ಬಳಿಕ ಜನರ ನಿತ್ಯ ಸಂಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ಬಸ್‌ಗಳನ್ನು ಓಡಿಸಲು ಕೆಎಸ್ಸಾರ್ಟಿಸಿ ಉಡುಪಿ ಘಟಕ ನಿರ್ಧರಿಸಿದೆ.

ಇದರಂತೆ ಉಡುಪಿಯಿಂದ ಬೆಂಗಳೂರಿಗೆ 20, ಕಾರ್ಕಳಕ್ಕೆ 8, ಕುಂದಾಪುರಕ್ಕೆ 9, ಮಂಗಳೂರಿಗೆ 6, ಶಿವಮೊಗ್ಗಕ್ಕೆ 4, ಶಿರೂರು-ಆಗುಂಬೆ, ಶೃಂಗೇರಿ ಬಾಳೆಹೊನ್ನೂರು, ಚಿಕ್ಕಮಗಳೂರಿಗೂ ಉಡುಪಿಯಿಂದ ಬಸ್ಸುಗಳ ಸಂಚರಿಸ ತೊಡಗಿವೆ. ಇದೀಗ ಹೆಬ್ರಿ ಭಾಗಗಳಿಗೆ ನರ್ಮ್ ಬಸ್ಸುಗಳು ಸಂಚರಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News