×
Ad

ಕುಂದಾಪುರ: ಪೊಲೀಸರಿಗೆ ಕೊಡೆ ವಿತರಣೆ

Update: 2021-06-24 21:44 IST

ಕುಂದಾಪುರ ಜೂ. 24: ಕೊರೋನ ಸಂಕಷ್ಟದ ಸಮಯದಲ್ಲಿ ಮುಂಚೂಣಿ ಯಲ್ಲಿದ್ದು ಶ್ರಮಿಸಿದ ಪೊಲೀಸರಿಗೆ ಜಿಲ್ಲಾ ತೋಟಗಾರಿಕಾ ಬೆಳೆಗಾರರ ಸಹಕಾರಿ ಸಂಘ ಮತ್ತು ಜನೌಷಧಿ ಕೇಂದ್ರಗಳು ಜಂಟಿಯಾಗಿ ಈ ಬಾರಿ ಕೊಡೆಗಳನ್ನು ವಿತರಿಸಲು ನಿರ್ಧರಿಸಿದ್ದು, ಅದರಂತೆ ಜಿಲ್ಲೆಯ ಐದು ಪೊಲೀಸ್ ಠಾಣೆಗಳ ಸಿಬಂದಿಗಳಿಗೆ ಕೊಡೆಗಳನ್ನು ವಿತರಿಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ತೋಟಗಾರಿಕಾ ಬೆಳೆಗಾರರ ಸಂಘದ ನಿರ್ದೇಶಕ ಪ್ರದೀಪ್ ಹೆಬ್ಬಾರ್ ಹೇಳಿದ್ದಾರೆ.

ಗುರುವಾರ ಸಂಘದ ವತಿಯಿಂದ ಕುಂದಾಪುರ ಪೊಲೀಸ್ ಠಾಣಾ ಸಿಬಂದ್ದಿ ಗಳಿಗೆ ಕೊಡೆ ವಿತರಿಸಿ ಅವರು ಮಾತನಾಡುತಿದ್ದರು. ಉಡುಪಿ ಜಿಲ್ಲಾ ತೋಟಗಾರಿಕಾ ಬೆಳೆಗಾರರ ಸಹಕಾರಿ ಸಂಘ ಜಿಲ್ಲೆಯ ಆರು ಕಡೆಗಳಲ್ಲಿ ಜನೌಷಧಿ ಕೇಂದ್ರಗಳನ್ನು ತೆರೆದಿದೆ. ಗ್ರಾಮೀಣ ಜನತೆಗೆ ಕೇಂದ್ರ ಸರ್ಕಾರದ ಉತ್ತಮ ಯೋಜನೆಯ ಪ್ರಯೋಜನ ಲಭಿಸಲಿ ಎಂಬ ಉದ್ದೇಶದಿಂದ ಕೋಟೇಶ್ವರ, ಬಸ್ರೂರು, ಸಿದ್ದಾಪುರ, ಸಾಬರಕಟ್ಟೆ, ಕೊಕ್ಕರ್ಣೆ, ಪುಲ್ಕೇರಿಗಳಲ್ಲಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದರು.

ತೋಟಗಾರಿಕಾ ಬೆಳೆಗಾರರ ಸಹಕಾರಿ ಸಂಘದ ಧ್ಯೇಯೋದ್ದೇಶಗಳನ್ನು ಸಂಘದ ಅಧ್ಯಕ್ಷ ಅಶೋಕ್‌ ಕುಮಾರ್ ಕೊಡ್ಗಿ ವಿವರಿಸಿದರು. ಈ ಸಂದರ್ಭದಲ್ಲಿ ಕುಂದಾಪುರ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಗೋಪಿಕೃಷ್ಣ, ಸಬ್ ಇನ್‌ಸ್ಪೆಕ್ಟರ್ ಸದಾಶಿವ ಗವರೋಜಿ, ಪುರಸಭಾಧ್ಯಕ್ಷೆ ವೀಣಾ ಭಾಸ್ಕರ್, ಬಿಜೆಪಿ ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆ, ಸಹಕಾರಿ ಸಂಘದ ಉಪಾಧ್ಯಕ್ಷ ವಿಠಲ್ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಐತಾಳ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News