×
Ad

ದ.ಕ. ಜಿಲ್ಲಾ ಕಾಂಗ್ರೆಸ್ ಹೆಲ್ಪ್‌ಲೈನ್‌ನಿಂದ ಜನಾಂದೋಲನ ಕಾರ್ಯಕ್ರಮ

Update: 2021-06-24 22:10 IST

ಮಂಗಳೂರು, ಜೂ.24: ‘ಎಲ್ಲರಿಗೂ ಉಚಿತ ಲಸಿಕೆ’ ಎಂದು ಹೋರ್ಡಿಂಗ್ ಹಾಕಲಾದ ಮಲ್ಲಿಕಟ್ಟೆಯ ಬಳಿ ತೆರಳಿದ ದ.ಕ. ಜಿಲ್ಲಾ ಕಾಂಗ್ರೆಸ್ ಹೆಲ್ಪ್‌ಲೈನ್‌ನ ನಿಯೋಗವು ‘ಸರ್ವರಿಗೂ ಲಸಿಕೆ. ಆದರೆ, ಉಚಿತ ಲಸಿಕೆ ಎಲ್ಲಿ?’ ಎಂದು ಪ್ರಶ್ನಿಸುವ ಮೂಲಕ ಗುರುವಾರ ಜನಾಂದೋಲನ ಕಾರ್ಯಕ್ರಮ ನಡೆಸಿತು.

ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ‘ನಾಮಫಲಕ ಮಾತ್ರವೇ ಉಚಿತ ಹೊರತು ಲಸಿಕೆ ಉಚಿತವಿಲ್ಲ. ಹೀಗೆ ಸುಳ್ಳು ಹೇಳುತ್ತಿರುವುದು ನಾಚಿಗೇಡಿತನವಾಗಿದೆ. ಕಳೆದ 7 ವರ್ಷಗಳಿಂದ ಎಲ್ಲ ಅಶ್ವಾಸನೆಗಳನ್ನು ನೀಡಿ ವಂಚಿಸಿದ ಕೇಂದ್ರ ಮತ್ತು ರಾಜ್ಯ ಸರಕಾರಗಳು, ಈಗ ಉಚಿತ ಲಸಿಕೆ ನೀಡದೆ ವಂಚಿಸುತ್ತಿದೆ. ಇದು ದೇಶದ ಜನರಿಗೆ ಮಾಡಿದ ಮೋಸವಾಗಿದೆ. ತಕ್ಷಣ ಜಾಹೀರಾತನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಕೋವಿಡ್ ಹೆಲ್ಪ್‌ಲೈನ್ ಸಂಚಾಲಕ ಮತ್ತು ಮಾಜಿ ಶಾಸಕ ಐವನ್ ಡಿಸೋಜ ಮಾತನಾಡಿ, ನಗರದಲ್ಲಿ ಪ್ರತೀ ದಿನ 10,000 ಮಂದಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತದೆ. ಪ್ರತಿಯೊಂದು ಡೋಸ್ ಲಸಿಕೆಗೂ 850 ರೂ. ವಸೂಲು ಮಾಡಲಾಗುತ್ತಿದೆ. ಇದು ಉಚಿತ ಲಸಿಕೆಯೇ?. ದಿನವೊಂದಕ್ಕೆ ಸರಕಾರದಿಂದ ಕೇವಲ 800 ಮಂದಿಗೆ ಲಸಿಕೆ ನೀಡಲಾಗುತ್ತಿದೆ. ಇದು ದಂಧೆಯಲ್ಲವೇ? ಎಮದು ಪ್ರಶ್ನಿಸಿದರು.

ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತ್‌ಬೈಲ್, ಕಾರ್ಪೊರೇಟರ್ ನವೀನ್ ಡಿಸೋಜ ಮಾತನಾಡಿದರು.

ಮಾಜಿ ಕಾರ್ಪೊರೇಟರ್‌ಗಳಾದ ಭಾಸ್ಕರ್ ರಾವ್, ಅಪ್ಪಿಲತಾ, ಗೀತಾ ಪಾಂಡೇಶ್ವರ, ಸಂತೋಷ್ ಶೆಟ್ಟಿ, ಸದಾಶಿವ ಶೆಟ್ಟಿ, ಎನ್.ಎಸ್. ಕರೀಂ, ಅಶಿತ್ ಪಿರೇರಾ, ಶೋಭಾ ಕೇಶವ, ತೆರೆಝಾ ಪಿಂಟೋ, ಮೀನಾ ಟೆಲ್ಲಿಸ್, ಸತೀಶ್ ಪೆಂಗಲ್, ಇಮ್ರಾನ್, ಯೂಸುಫ್ ಉಚ್ಛಿಲ್, ಆರೀಫ್ ಬಾವ, ಮಹೇಶ್ ಕೋಡಿಕಲ್, ಜೇಮ್ಸ್ ಪ್ರವೀಣ್, ಹಸನ್ ಪಳ್ನೀರ್, ದೀಕ್ಷಿತ್ ಅತ್ತಾವರ, ಯೋಗಿಶ್ ನಾಯಕ್, ಆನಂದ್ ಸೋನ್ಸ್, ಸಾಹುಲ್ ಹಮೀದ್, ಹಬೀಬುಲ್ಲಾ ಕಣ್ಣೂರು, ವಿವೇಕ್ ರಾಜ್ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News