×
Ad

ಅಪಾಯಕಾರಿ ಚಾಲನೆ: ರಾಬರ್ಟ್ ವಾದ್ರಾ ಅವರ ವಾಹನಕ್ಕೆ ದಂಡ

Update: 2021-06-25 10:50 IST

ಹೊಸದಿಲ್ಲಿ: ಉದ್ಯಮಿ ರಾಬರ್ಟ್ ವಾದ್ರಾ ಅವರ ವಾಹನಕ್ಕೆ ಅಪಾಯಕಾರಿ ಚಾಲನೆಗಾಗಿ ದಂಡ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 184 (ಅಪಾಯಕಾರಿಯಾಗಿ ವಾಹನ ಚಲಾಯಿಸುವುದು) ಅಡಿಯಲ್ಲಿ ಬುಧವಾರ ಬೆಳಿಗ್ಗೆ ದಂಡ ವಿಧಿಸಲಾಗಿದೆ. ವಾದ್ರಾ ಅವರ ಭದ್ರತಾ ಸಿಬ್ಬಂದಿ ಮತ್ತೊಂದು ವಾಹನದಲ್ಲಿ ಅವರನ್ನು ಹಿಂಬಾಲಿಸುತ್ತಿದ್ದರು ಎಂದು ಅವರು ಹೇಳಿದರು.

ವಾದ್ರಾ ಅವರು ಆಗ್ನೇಯ ದಿಲ್ಲಿಯ ಸುಖದೇವ್ ವಿಹಾರ್ ಪ್ರದೇಶದ ತಮ್ಮ ಕಚೇರಿಗೆ ತೆರಳುತ್ತಿದ್ದಾಗ ಅಪಾಯಕಾರಿ ಚಾಲನೆಗೆ ದಂಡ ವಿಧಿಸಲ್ಪಟ್ಟ ವಾಹನವನ್ನು ವಾದ್ರಾ ಅವರ ಚಾಲಕ ಚಾಲನೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಾರಾಪುಲ್ಲಾ ಫ್ಲೈಓವರ್ ಬಳಿ ಈ ಘಟನೆ ನಡೆದಿದ್ದು, ವಾಹನದ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದ. ಈ ವೇಳೆ  ಅವರನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ  ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ವಾಹನದಲ್ಲಿ ಭದ್ರತಾ ಸಿಬ್ಬಂದಿ ಇದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ವಾದ್ರಾ ಅವರು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಅಳಿಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News