×
Ad

ಮಿಯಾಮಿ:ಬಹುಮಹಡಿ ಕಟ್ಟಡ ಕುಸಿತ: ನೂರಾರು ಮಂದಿ ಸಿಲುಕಿರುವ ಶಂಕೆ

Update: 2021-06-25 13:51 IST
photo: mobile.twitter.com

ಸರ್ಫ್ ಸೈಡ್(ಅಮೆರಿಕ): ಮಿಯಾಮಿ ಸಮೀಪದ ಸಮುದ್ರತೀರ ಪ್ರದೇಶದಲ್ಲಿ 12 ಅಂತಸ್ತಿನ ಕಟ್ಟಡದ ಒಂದು ಭಾಗ(ಗೋಪುರ)ಗುರುವಾರ ಬಹುತೇಕ ಕುಸಿದುಬಿದ್ದಿದ್ದು, ಹಲವರು ಕಟ್ಟಡದ ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ.

ಇಲ್ಲಿಯ ತನಕ ಒಂದು ಶವ ಸಿಕ್ಕಿದೆ. ಸುಮಾರು 12 ಜನರನ್ನು ರಕ್ಷಿಸಲಾಗಿದೆ. ಅವಶೇಷಗಳಡಿ 100ಕ್ಕೂ ಹೆಚ್ಚು ಜನರು ಸಿಲುಕಿರುವ ಸಾಧ್ಯತೆ ಇದ್ದು, ಸಾವು-ನೋವಿನ ಸಂಖ್ಯೆ ಹೆಚ್ಚಳವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಹುಮಹಡಿ ಕಟ್ಟಡವು ಗುರುವಾರ ಮುಂಜಾನೆ 1:30ರ ಸಮಯದಲ್ಲಿ ಭಾಗಶಹ ಕುಸಿದಿದೆ. ಕಟ್ಟಡ ಕುಸಿಯುವ ಸಂದರ್ಭದಲ್ಲಿ ಎಷ್ಟು ನಿವಾಸಿಗಳು ಇದ್ದರು ಎಂಬುದರ ಖಚಿತ ಮಾಹಿತಿ ಲಭ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಸುಮಾರು 10ರಿಂದ 12 ರಕ್ಷಣಾ ತಂಡಗಳು ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಅತ್ಯಾಧುನಿಕ ಯಂತ್ರೋಪಕರಣಗಳ ಜೊತೆಗೆ ಬದುಕುಳಿದಿರುವವರ ಹಾಗೂ ಮೃತರ ಪತ್ತೆಗೆ ಶ್ವಾನಗಳನ್ನೂ ಬಳಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News