×
Ad

​ನಡುಪದವು: ಲಸಿಕಾ ಅಭಿಯಾನಕ್ಕೆ ಚಾಲನೆ

Update: 2021-06-25 16:51 IST

ಕೊಣಾಜೆ: ಕೋವಿಡ್ ಸಂಕಷ್ಟ ಕಾಲದಲ್ಲಿಯೂ ಪ್ರತಿಯೊಬ್ಬರ ಆರೋಗ್ಯ ಸಂರಕ್ಷಣೆ‌ಯೊಂದಿಗೆ ಗ್ರಾಮದ ಸ್ವಾಸ್ಥ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಕೈರಂಗಳ ಗ್ರಾಮದ ನಡುಪದವಿನಲ್ಲಿ ನಾಗರಿಕರು ಕೊರೋನ ತಡೆ ಜಾಗೃತಿಯೊಂದಿಗೆ ಲಸಿಕಾ ಅಭಿಯಾನಕ್ಕೆ ಕೈ ಜೋಡಿಸಿ ಯಶಸ್ವಿಗೊಳಿಸುತ್ತಿರುವುದು  ಮಾದರಿಯಾಗಿದೆ ಎಂದು ಶಾಸಕ ಯು.ಟಿ.ಖಾದರ್  ಹೇಳಿದರು.

ಅವರು ಕೈರಂಗಳ ಗ್ರಾಮದ ನಡುಪದವು ಶಾಲಾ ವಠಾರದಲ್ಲಿ ಶುಕ್ರವಾರ ನಡೆದ ಬಾಳೆಪುಣಿ ಗ್ರಾಮ ಪಂಚಾಯಿತಿ, ಕುರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರ ಕೋವಿಡ್ ಕಾರ್ಯಪಡೆ, ಜಿಲ್ಲಾ ನೋಡೆಲ್ ಸಂಸ್ಥೆ, ಜನಶಿಕ್ಷಣ ಟ್ರಸ್ಟ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ 18 ವರ್ಷ ಮೇಲ್ಪಟ್ಟವರ ಕೊರೋನ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಬಂಟ್ವಾಳ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಜಿಲ್ಲಾ ಪಂಚಾಯತಿ ಸದಸ್ಯೆ ಮಮತಾ ಗಟ್ಟಿ,  ಬಾಳೆಪುಣಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ರಝಿಯಾ, ಅಬ್ದುಲ್ ನಾಸೀರ್ ಎನ್ ಎಸ್ ನಡುಪದವು, ಬಾಪು ಘನ ತ್ಯಾಜ್ಯ ಘಟಕದ ಅಧ್ಯಕ್ಷ ಇಬ್ರಾಹಿಂ ನಡುಪದವು, ಬ್ರೈಟ್ ಶಿಕ್ಷಣ ಸಂಸ್ಥೆಯ ಅಬ್ದುಲ್ ಜಲೀಲ್ ಮೋಂಟುಗೋಳಿ, ಜನಶಿಕ್ಷಣ ಟ್ರಸ್ಟ್ ನ ಶೀನ ಶೆಟ್ಟಿ, ಕೃಷ್ಞ ಮೂಲ್ಯ, ಅಬ್ದುಲ್ ನಾಸೀರ್ ಕೆ.ಕೆ, , ಬಾಳೆಪುಣಿ ಪಂಚಾಯತಿ ಪಿಡಿಒ ಸುನಿಲ್ ಕುಮಾರ್, ಸದಸ್ಯರಾದ ಜನಾರ್ದನ ಕುಲಾಲ್, ಲಿಡಿಯಾ ಡಿಸೋಜ, ಅಂಜಲಿ ಪ್ರಕಾಶ್, ಎಸ್ ಡಿಎಂಸಿ ಅಧ್ಯಕ್ಷ ಸಿ.ಎಂ.ಶರೀಫ್ ಪಟ್ಟೋರಿ, ಮಾಜಿ ಅಧ್ಯಕ್ಷ ಮೊಹಮ್ಮದ್ ಬಾವ ನಡುಪದವು ಮೊದಲಾದವರು ಉಪಸ್ಥಿತರಿದ್ದರು.

''ನಡುಪದವು ಮಸೀದಿ ಸಮಿತಿ ಜನರ ಆರೋಗ್ಯದ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸಿದೆ ಹಾಗೂ ಕ್ವಾರಂಟೈನ್ ಘಟಕ ಸ್ಥಾಪಿಸಿದ್ದು ಪರಿಸರದ ಜನರಿಗೆ ಅನುಕೂಲವಾಗಿದೆ. ನಡುಪದವು ಹೆಲ್ಪ್ ಲೈನ್ ಆಶ್ರಯದಲ್ಲಿ ಎಲ್ಲ ವಯೋಮಾನದವರಿಗೂ ಲಸಿಕೆ ಲಭಿಸುವಂತೆ ಮಾಡಲಾಗಿದ್ದು ಶೇ.95 ಮಂದಿ ಇದರ ಪ್ರಯೋಜನ ಪಡೆದಿದ್ದಾರೆ''.

- ಅಬ್ದುಲ್ ನಾಸೀರ್‌ ಎನ್.ಎಸ್, ನಡುಪದವು ಅಲ್ ಉಮರ್ ಜುಮಾ‌ ಮಸೀದಿಯ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News