ಉಡುಪಿ: ರವಿವಾರವೂ ವಾರಾಂತ್ಯದ ಕರ್ಫ್ಯೂ
ಉಡುಪಿ, ಜೂ.25: ಜಿಲ್ಲೆಯಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಿದ ಬಳಿಕ ಮೊದಲ ಬಾರಿ ವಾರಾಂತ್ಯದ ಕರ್ಫ್ಯೂ ರವಿವಾರವೂ ಇರಲಿದೆ. ಇದು ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಅಗತ್ಯ ಮತ್ತು ತುರ್ತು ಚಟುವಟಿಕೆಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಮಾಂಸ ಮತ್ತು ಮೀನು, ಡೈರಿ ಮತ್ತು ಹಾಲಿನ ಕೇಂದ್ರ ಹಾಗೂ ಪ್ರಾಣಿಗಳ ಮೇವನ್ನು ವ್ಯಾಪಾರ ಮಾಡುವ ಅಂಗಡಿಗಳಿಗೆ ಬೆಳಗ್ಗೆ 6 ರಿಂದ ಅಪರಾಹ್ನ 2 ರವರೆಗೆ ಕಾರ್ಯ ನಿರ್ವಹಿಸಲು ಅವಕಾಶವಿರುತ್ತದೆ. ಬೀದಿ ಬದಿ ವ್ಯಾಪಾರಿ ಗಳು ಸಹ ಬೆಳಗ್ಗೆ 6 ರಿಂದ ಅಪರಾಹ್ನ 2 ರವರೆಗೆ ಕಾರ್ಯನಿರ್ವಹಿಸಬಹುದು. ಆದರೆ ಯಾವುದೇ ತಯಾರಿಸಿದ ಆಹಾರ, ಪಾನಿಪುರಿ, ಚಾಟ್ಸ್ ಮಾರಲು ಅವಕಾಶವಿಲ್ಲ.
ಸ್ವತಂತ್ರ ಮದ್ಯದಂಗಡಿಗಳು ಮತ್ತು ಮಳಿಗೆಗಳು ಈ ಅವಧಿಯಲ್ಲಿ ಪಾರ್ಸೆಲ್ ಗಳನ್ನು ಮಾತ್ರ ನೀಡಬಹುದು. ಹೋಮ್ ಡೆಲಿವರಿ ಸೇವೆಗಳು ದಿನದ 24 ಗಂಟೆ ಕಾರ್ಯನಿರ್ವಹಿಸಬಹುದು. ರೆಸ್ಟೋರೆಂಟ್‌ಗಳು, ತಿನಿಸು ಕೇಂದ್ರಗಳಲ್ಲಿ ಆಹಾರವನ್ನು ಪಾರ್ಸೆಲ್ ಕೊಂಡೊಯ್ಯಬಹುದು.
ಸ್ವತಂತ್ರ ಮದ್ಯದಂಗಡಿಗಳು ಮತ್ತು ಮಳಿಗೆಗಳು ಈ ಅವಧಿಯಲ್ಲಿ ಪಾರ್ಸೆಲ್ ಗಳನ್ನು ಮಾತ್ರ ನೀಡಬಹುದು. ಹೋಮ್ ಡೆಲಿವರಿ ಸೇವೆಗಳು ದಿನದ 24 ಗಂಟೆ ಕಾರ್ಯನಿರ್ವಹಿಸಬಹುದು. ರೆಸ್ಟೋರೆಂಟ್‌ಗಳು, ತಿನಿಸು ಕೇಂದ್ರಗಳಲ್ಲಿ ಆಹಾರವನ್ನು ಪಾರ್ಸೆಲ್ ಕೊಂಡೊಯ್ಯಬಹುದು. ಬಸ್ ಸೇವೆಗಳು, ರೈಲುಗಳು ಮತ್ತು ವಿಮಾನ ಪ್ರಯಾಣಿಕರಿಗೆ ನಿಲ್ದಾಣಗಳಿಗೆ ತೆರಳಲು ಅನುಮತಿ ಇದೆ. ವಿವಿಧ ನಿಲ್ದಾಣಗಳಿಂದ ಹೊರಡುವ ಸಾರ್ವಜನಿಕ ಸಾರಿಗೆ ವಾಹನ, ಖಾಸಗಿ ವಾಹನ, ಟ್ಯಾಕ್ಸಿಗಳ ಓಡಾಟಕ್ಕೆ ಅನುಮತಿ ಇದೆ. ಈಗಾಗಲೇ ನಿಗದಿಯಾಗಿರುವ ಮದುವೆಗೆ 40 ಮಂದಿಯ ಭಾಗವಹಿಸುವಿಕೆ ಯೊಂದಿಗೆ ಸರಳವಾಗಿ ಮನೆಯಲ್ಲಿ ನಡೆಸಲು ಅನುಮತಿ ಇದೆ. ಅದೇ ರೀತಿ ಶವಸಂಸ್ಕಾರವನ್ನೂ ಐದು ಮಂದಿಯ ಪಾಲ್ಗೊಳ್ಳುವಿಕೆಯೊಂದಿಗೆ ನಡೆಸಬಹುದು.
ತುರ್ತು ಮತ್ತು ಅಗತ್ಯ ಸೇವೆಗಳ ಕೈಗಾರಿಕೆಗಳು, ಸಂಸ್ಥೆಗಳಿಗೆ ಕಾರ್ಯ ನಿರ್ವಹಿಸಲು ಅನುಮತಿ ಇದೆ. ರೋಗಿಗಳು, ಅವರ ಪರಿಚಾರಕರು, ಲಸಿಕೆ ತೆಗೆದುಕೊಳ್ಳುವವರು ಅಗತ್ಯ ದಾಖಲೆಗಳೊಂದಿಗೆ ಸಂಚರಿಸಲು ಅವಕಾಶವಿದೆ ಎಂದು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.