ಉತ್ತರಪ್ರದೇಶ: ಮಾಸ್ಕ್ ಹಾಕದೇ ಇರುವುದಕ್ಕೆ ಗುಂಡು ಹಾರಿಸಿದ ಭದ್ರತಾ ಸಿಬ್ಬಂದಿ !‌

Update: 2021-06-25 16:57 GMT
ಸಾಂದರ್ಭಿಕ ಚಿತ್ರ 

ಲಕ್ನೋ, ಜೂ. 25: ಮಾಸ್ಕ್ ಹಾಕದ ಕುರಿತಂತೆ ವಾಗ್ವಾದ ನಡೆದ ಬಳಿಕ ಖಾಸಗಿ ಭದ್ರತಾ ಸಿಬ್ಬಂದಿ ಗ್ರಾಹಕನ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ ಘಟನೆ ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಬ್ಯಾಂಕೊಂದರಲ್ಲಿ ಶುಕ್ರವಾರ ನಡೆದಿದೆ. ಬರೇಲಿಯ ಬ್ಯಾಂಕ್ ಆಫ್ ಬರೋಡದಲ್ಲಿ ನಡೆದ ಈ ಘಟನೆಯ ಭಯಾನಕ ವೀಡಿಯೊದಲ್ಲಿ ರೈಲ್ವೆ ಉದ್ಯೋಗಿ ರಾಜೇಶ್ ಕುಮಾರ್ ಅವರು ಗುಂಡಿನಿಂದ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. 

ಈ ಘಟನೆಯಿಂದ ವಿಚಲಿತಳಾದ ರಾಜೇಶ್ ಕುಮಾರ್ ಅವರ ಪತ್ನಿ, ಮೊಣಕಾಲಲ್ಲಿ ಕುಳಿತಿರುವ ಹಾಗೂ ‘‘ನೀನು ಯಾಕೆ ಶೂಟ್ ಮಾಡಿದೆ’’ ಎಂದು ಪ್ರಶ್ನಿಸುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ. 27 ಸೆಕೆಂಡ್ಗಳ ವೀಡಿಯೊ ದಾಖಲಿಸಿದ್ದಾನೆ ಎಂದು ಹೇಳಲಾದ ಅನಾಮಿಕ ವ್ಯಕ್ತಿ, ‘‘ನೀನು ಹೇಗೆ ಶೂಟ್ ಮಾಡಿದೆ. ನೀನು ಜೈಲಿಗೆ ಹೋಗುತ್ತಿ. ತಿಳಿದಿದೆಯೇ?’’ ಎಂದು ಹೇಳುವುದು ಕೇಳಿ ಬಂದಿದೆ. ಗಂಭೀರ ಗಾಯಗೊಂಡಿರುವ ರಾಜೇಶ್ ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭದ್ರತಾ ಸಿಬ್ಬಂದಿಯನ್ನು ಉತ್ತರಪ್ರದೇಶ ಪೊಲೀರು ವಶಕ್ಕೆ ತೆಗೆದುಕೊಂಡಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News