ಮಂಗಳೂರು: ಅಪಾರ್ಟ್‌ಮೆಂಟ್‌ನಿಂದ ಹಾರಿ ವೃದ್ಧೆ ಆತ್ಮಹತ್ಯೆ
Update: 2021-06-27 17:52 IST
ಮಂಗಳೂರು, ಜೂ.28: ನಗರದ ಕದ್ರಿ ಸಮೀಪದ ಶಿವಭಾಗ್ ಬಳಿಯ ಅಪಾರ್ಟ್‌ಮೆಂಟ್‌ವೊಂದರಿಂದ ವೃದ್ಧೆಯೊಬ್ಬರು ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ನಡೆದಿದೆ.
ತಾರಾ (71) ಎಂಬವರು ಆತ್ಮಹತ್ಯೆ ಮಾಡಿಕೊಂಡವರು.
ಕದ್ರಿ ಶಿವಭಾಗ್‌ನ 5ನೇ ಕ್ರಾಸ್‌ನ ಅಪಾರ್ಟ್‌ಮೆಂಟ್‌ನಲ್ಲಿ ಇವರು ಮಗನ ಜತೆ ವಾಸ ಮಾಡುತ್ತಿದ್ದರು. ರವಿವಾರ ಅಪಾರ್ಟ್‌ಮೆಂಟ್‌ನ ಟ್ಯಾರೆಸ್ ಮೇಲ್ಗಡೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 5 ವರ್ಷಗಳಿಂದ ಇವರು ಮಾನಸಿಕ ಖಿನ್ನತೆಗೊಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.