ದ.ಕ. ಜಿಲ್ಲೆಯಲ್ಲಿ ಸಾಧಾರಣ ಮಳೆ
ಮಂಗಳೂರು, ಜೂ.27: ದ.ಕ. ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಭಾಗದ ಬಹುತೇಕ ಕಡೆಗಳಲ್ಲಿ ರವಿವಾರ ಸಾಮಾನ್ಯ ಮಳೆಯಾಗಿದೆ. ಈ ಮಧ್ಯೆ ಕೆಲಕಾಲ ಬಿಸಿಲ ವಾತಾವರಣ ಕಂಡು ಬಂದರೂ ಹೆಚ್ಚಿನ ಅವಧಿಯಲ್ಲಿ ಮೋಡ ಕವಿದ ವಾತಾವರಣವಿತ್ತು. ಶನಿವಾರ ರಾತ್ರಿಯಿಂದ ರವಿವಾರ ಮುಂಜಾನೆಯವರೆಗೆ ಸತತ ಮಳೆ ಸುರಿದಿದೆ. ಬೆಳಗ್ಗಿನ ಬಳಿಕ ಕಡಿವೆುಯಾಗಿದೆ.
ಜೂ. 29ರಿಂದ ಯೆಲ್ಲೋ ಅಲರ್ಟ್ : ದ.ಕ.ಜಿಲ್ಲೆಯ ಬಹುತೇಕ ಕಡೆ ಜೂ.29ರಿಂದ ಜು.1ರವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಎಲ್ಲ ಸ್ಥಳಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪೂರ್ವ ಅರಬ್ಬೀ ಸಮುದ್ರದ ಕರ್ನಾಟಕದ ಕರಾವಳಿಯಲ್ಲಿ ಕಡಿಮೆ ಒತ್ತಡವಿರುವ ವಿಸ್ತರಿಸಿದ ಪ್ರದೇಶವಿದೆ. ಹಾಗಾ ಕರಾವಳಿ ಜಿಲ್ಲೆಗಳ ಬಹುತೇಕ ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ.
ರವಿವಾರ ಬೆಳ್ತಂಗಡಿಯಲ್ಲಿ 17.8 ಮಿ.ಮೀ., ಬಂಟ್ವಾಳ 17 ಮಿ.ಮೀ., ಮಂಗಳೂರು 27.9 ಮಿ.ಮೀ., ಪುತ್ತೂರು 19.2 ಮಿ.ಮೀ, ಸುಳ್ಯ 25.4 ಮಿ.ಮೀ., ಮೂಡುಬಿದಿರೆ 28.9 ಮಿ.ಮೀ, ಕಡಬದಲ್ಲಿ 18.7 ಮಿ.ಮೀ ಸಹಿತ ಜಿಲ್ಲೆಯಲ್ಲಿ ಸರಾಸರಿ 22.7 ಮಿ.ಮೀ. ಮಳೆಯಾಗಿದೆ.ರವಿವಾರ ಗರಿಷ್ಠ ತಾಪಮಾನ 28.8 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 22.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.