ಸುಬ್ರಹ್ಮಣ್ಯನಗರ ಹಡಿಲುಭೂಮಿ ಕೃಷಿ ಕಾರ್ಯಕ್ಕೆ ಪೇಜಾವರ ಶ್ರೀ ಚಾಲನೆ
Update: 2021-06-27 21:43 IST
ಉಡುಪಿ, ಜೂ.27: ಕೇದಾರೋತ್ಥಾನ ಟ್ರಸ್ಟ್ ವತಿಯಿಂದ ಸುಬ್ರಹ್ಮಣ್ಯನಗರ ವಾರ್ಡಿನ ಪುತ್ತೂರು ಮುಂಡ್ರುಪಾಡಿ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ಕೆ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ರವಿವಾರ ಚಾಲನೆ ನೀಡಿದರು.
ಸ್ವಾಮೀಜಿ, ಉಡುಪಿ ಪುತ್ತೂರಿನ ಬಾಳಿಗಾ ಫಿಶ್‌ನೆಟ್‌ನ ವ್ಯವಸ್ಥಾಪಕ ನಿರ್ದೇಶಕ ಮುರಳಿಧರ ಬಾಳಿಗಾ, ಶಾಸಕ ಕೆ.ರಘುಪತಿ ಭಟ್ ಅವರೊಂದಿಗೆ ಹಾಲನ್ನು ಅರ್ಪಿಸಿ ನಾಟಿ ಕಾರ್ಯಕ್ಕೆ ಚಾಲನೆ ನೀಡಿ ಸ್ಥಳೀಯರೊಂದಿಗೆ ಸೇರಿ ನೇಜಿ ನೆಟ್ಟರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ನಗರಸಭಾ ಸದಸ್ಯೆ ಜಯಂತಿ, ಉದ್ಯಮಿಗಳಾದ ಮಹೇಶ್ ಶೆಟ್ಟಿ, ಸಂತೋಷ್ ಶೆಟ್ಟಿ, ಹಿರಿಯ ಕೃಷಿಕರಾದ ಸುಂದರ್ ಶೆಟ್ಟಿ, ಶಂಕರ್ ಶೆಟ್ಟಿ, ಐತಪ್ಪಶೆಟ್ಟಿ, ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಕೋಶಾಧಿಕಾರಿ ರಾಘವೇಂದ್ರ ಕಿಣಿ, ಸದಸ್ಯರಾದ ದಿನೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.