×
Ad

ಕಾರ್ಕಡ ಗೆಳೆಯರ ಬಳಗದಿಂದ ಅಗಲಿದ ಶಿವರಾಮ್ ಗೆ ಶ್ರದ್ದಾಂಜಲಿ

Update: 2021-06-27 21:44 IST

ಕೋಟ ಜೂ. 27: ಅಕಾಲಿಕ ಮರಣ ಹೊಂದಿರುವ ಕಾರ್ಕಡ ಗೆಳೆಯರ ಬಳಗದ ಮಾಜಿ ಕಾರ್ಯದರ್ಶಿ, ಕೋಟ ಸಹಕಾರಿ ಸಂಘದ ಸಾಲಿಗ್ರಾಮ ಶಾಖೆಯ ಪ್ರಬಂಧಕ ಶಿವರಾಮ್ ಕೆ.ಇವರಿಗೆ ಶ್ರದ್ಧಾಂಜಲಿ ಸಭೆ ಇತ್ತೀಚಿಗೆ ಕಾರ್ಕಡ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಜರಗಿತು.

ಕಾರ್ಯಕ್ರಮದಲ್ಲಿ ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷರಾದ ತಾರಾನಾಥ ಹೊಳ್ಳ, ಶಿವರಾಮ್ ಅವರ ಭಾವಚಿತ್ರಕ್ಕೆ ಪುಷ್ಪ ನಮನಗೈದರು. ವಿವೇಕ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಜಗದೀಶ್ ನಾವುಡ, ಕೋಟ ಸಹಕಾರಿ ಸಂಘದ ಅಧ್ಯಕ್ಷ ತಿಮ್ಮ ಪೂಜಾರಿ ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯ ಸಂಜೀವ ದೇವಾಡಿಗ, ಸರಕಾರಿ ಹಿರಿಯಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಪ್ರಭಾಕರ ಕಾಮತ್, ಜನಜಾಗೃತಿ ವೇದಿಕೆಯ ಅಧ್ಯಕ್ಷ ಅಚ್ಯುತ್ ಪೂಜಾರಿ, ಕೋಟ ವಿವೇಕ ವಿದ್ಯಾಸಂಸ್ಥೆಯ ಉಪನ್ಯಾಸಕ ಸಂಜೀವ ಗುಂಡ್ಮಿ ಉಪಸ್ಥಿತರಿದ್ದರು. ಬಳಗದ ಕೋಶಾಧಿಕಾರಿ ಶಶಿಧರ ಮಯ್ಯ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News