ತೆರಿಗೆ ಪಾವತಿಸದೆ ಪ್ರಯಾಣಿಕ ವಾಹನಗಳು ರಸ್ತೆಗಿಳಿದರೆ ದಂಡ: ಉಡುಪಿ ಪ್ರಾದೇಶಿಕ ಸಾರಿಗೆ
ಉಡುಪಿ, ಜೂ.27: ಕೋವಿಡ್ ನಿಯಮ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಯಾಣಿಕ ವಾಹನಗಳು(ಬಸ್, ಮ್ಯಾಕ್ಸಿಕ್ಯಾಬ್ ಮತ್ತು ಟ್ಯಾಕ್ಸಿ) ಅನು ಪಯುಕ್ತತೆಗಾಗಿ ವಾಹನದ ಮೂಲ ದಾಖಲಾತಿಗಳೊಂದಿಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಅತ್ಯರ್ಪಣ (ಸರೆಂಡರ್) ಮಾಡಿದ್ದರೆ, ಕಚೇರಿಗೆ ಅರ್ಜಿಯನ್ನು ಸಲ್ಲಿಸಿದ ನಂತರ ಮಾತ್ರ ವಾಹನವನ್ನು ಉಪಯೋಗಿಸಲು ಸಾಧ್ಯ ಎಂದು ಉಡುಪಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಜೆ.ಪಿ.ಗಂಗಾಧರ ತಿಳಿಸಿದ್ದಾರೆ.
ಜೂ.30ರೊಳಗೆ ವಾಹನದ ಬಾಕಿ ತೆರಿಗೆಯನ್ನು ಪಾವತಿಸದೆ/ವಿನಾಯಿತಿ ಯನ್ನು ಪಡೆಯದೆ ಹಾಗೂ ಪೂರ್ವನುಮತಿಯಿಲ್ಲದೆ ವಾಹನವನ್ನು ಸಾರ್ವ ಜನಿಕರ ಉಪಯೋಗಕ್ಕಾಗಿ ಬಳಸಿದರೆ ಭಾರೀ ದಂಡದೊಂದಿಗೆ ಉಳಿಕೆ ತೆರಿಗೆ ಯನ್ನು ಕಟ್ಟಲೆಬೇಕಾಗು ತ್ತದೆ ಎಂದು ಅವರು ಜಿಲ್ಲೆಯ ವಾಹನ ಮಾಲಕರಿಗೆ ಎಚ್ಚರಿಕೆ ನೀಡಿದ್ದಾರೆ.
ಬಸ್‌ನಲ್ಲಿ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಮತ್ತು ಚಾಲಕರು ಹಾಗೂ ನಿರ್ವಾಹಕರು ಕೋವಿಡ್ ಲಸಿಕೆ ಪಡೆದಿರಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.