ಜೂ.28ರಂದು 6000 ವಿದ್ಯಾರ್ಥಿಗಳಿಗೆ ಕೊರೋನ ಲಸಿಕೆ
ಉಡುಪಿ, ಜೂ.27: ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಡುಪಿ ಜಿಲ್ಲೆಯಾದ್ಯಂತ ಜೂ.28ರಂದು ಒಟ್ಟು 6000 ಡೋಸ್ ಕೋವಿಡ್ ಲಸಿಕೆ ಯನ್ನು ನೀಡಲು ಜಿಲ್ಲಾಡಳಿತ ಕಾರ್ಯಕ್ರಮ ಹಮ್ಮಿಕೊಂಡಿದೆ.
ತೆಂಕನಿಡಿಯೂರು ಕಾಲೇಜಿನಲ್ಲಿ 700, ಅಜ್ಜರಕಾಡು ಮಹಿಳಾ ಕಾಲೇಜಿನಲ್ಲಿ 500, ಬ್ರಹ್ಮಾವರ ಎಸ್‌ಎಂಎಸ್ ಕಾಲೇಜಿನಲ್ಲಿ 250, ಮಣಿಪಾಲ ಮಾಧವ ಪೈ ಕಾಲೇಜಿನಲ್ಲಿ 150, ಹೆಬ್ರಿ ಸರಕಾರಿ ಪದವಿ ಕಾಲೇಜಿನಲ್ಲಿ 200, ಮುನಿಯಾಲ್ ಸರಕಾರಿ ಪದವಿ ಕಾಲೇಜು 130, ಕುಂದಾಪುರ ಭಂಡಾರ್‌ಕಾರ್ ಕಾಲೇಜಿನಲ್ಲಿ 500, ಕುಂದಾಪುರ ಬಿ.ಬಿ.ಹೆಗ್ಡೆ ಕಾಲೇಜಿನಲ್ಲಿ 200, ಗಂಗೊಳ್ಳಿ ತೌಹೀದ್ ಕಾಲೇಜಿನಲ್ಲಿ 50, ಕೋಟೇಶ್ವರ ಕಲವರ ವರದರಾಜ್ ಎಂ.ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 200, ಮರ ವಂತೆ ಆರ್‌ಎಎಂಸಿ ಕಾಲೇಜಿನಲ್ಲಿ 200, ಶಂಕರನಾರಾಯಣ ಪದವಿ ಕಾಲೇಜು 300, ಬೈಂದೂರು ಕಾಲೇಜಿನಲ್ಲಿ 300, ಬಸ್ರೂರು ಶಾರದ ಕಾಲೇಜಿನಲ್ಲಿ 200, ಕಾರ್ಕಳ ಭುವನೇಂದ್ರ ಕಾಲೇಜು 100 ಡೋಸ್ ಕೋವಿಶೀಲ್ಡ್ ಲಸಿಕೆ ವಿತರಿಸಲಾಗುತ್ತದೆ.
ಉಡುಪಿ ಜಿಲ್ಲೆಯ ಸರಕಾರಿ, ಖಾಸಗಿ ಅನುದಾನಿತ/ಅನುದಾನ ರಹಿತ ಹಾಗೂ ಪಾಲಿಟೆಕ್ನಿಕ್ ಮತ್ತು ಐಟಿಐ ಕಾಲೇಜುಗಳಲ್ಲಿ 18 ವರ್ಷ ಮೇಲ್ಪಟ್ಟ 31397 ಅರ್ಹ ವಿದ್ಯಾರ್ಥಿಗಳಿದ್ದು, 1911 ಬೋಧಕ ಸಿಬ್ಬಂದಿಗಳು, 626 ಬೋಧಕೇತರ ಸಿಬ್ಬಂದಿಗಳು ಸೇರಿದಂತೆ ಒಟ್ಟು 33934 ಮಂದಿ ಇದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದ್ದಾರೆ.