ಶಕ್ತಿ ವಿದ್ಯಾಸಂಸ್ಥೆ : ಸಿಎ/ಸಿಎಸ್ ಫೌಂಡೇಶನ್ ಕೋಚಿಂಗ್ ಉದ್ಘಾಟನೆ
ಮಂಗಳೂರು, ಜೂ.27: ಆತ್ಮವಿಶ್ವಾಸ ನಮ್ಮಲ್ಲಿದ್ದಾಗ ಯಶಸ್ಸನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಆಗ ನಮ್ಮ ಪ್ರಯತ್ನಕ್ಕೆ ತಕ್ಕ ಫಲ ಪ್ರಾಪ್ತಿಯಾಗುವುದು. ಶಕ್ತಿ ಪಿಯು ಕಾಲೇಜಿನಲ್ಲಿರುವ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಸಿಎ ಕಿರಣ್ ವಸಂತ್ ತಿಳಿಸಿದ್ದಾರೆ.
ಶಕ್ತಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಸಿಎ ಮತ್ತು ಸಿಎಸ್ ಫೌಂಡೇಶನ್ ಕೋಚಿಂಗ್‌ನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಪ್ರಯಾಣವು ಮೊದಲ ಹೆಜ್ಜೆಯಿಂದ ಪ್ರಾರಂಭವಾಗುತ್ತದೆ. ಮೊದಲ ಹೆಜ್ಜೆ ಪ್ರಥಮ ಪಿಯುಸಿನಲ್ಲಿ ಪ್ರಾರಂಭವಾಗುತ್ತದೆ. ಸಕಾರಾತ್ಮಕವಾಗಿರಿ, ಮುಂದಿನ ನಾಲ್ಕು ಅಥವಾ ಐದು ವರ್ಷಗಳವರೆಗೆ ಬದ್ಧತೆ ಪ್ರದರ್ಶಿಸ ಬೇಕು. ನೀವು ಯಾವ ಶಕ್ತಿಯನ್ನು ಹೊಂದಿದ್ದೀರಿ ಎಂದು ಊಹಿಸಲಾಗದಷ್ಟು ಬೇಗ ಪದವಿಯನ್ನು ನೀವು ಹೊಂದಿರು ತ್ತೀರಿ. ಹಣವು ಹೋಗುತ್ತದೆ, ಸ್ವತ್ತುಗಳು ಹೋಗುತ್ತವೆ. ಆದರೆ ಜ್ಞಾನವು ಯಾವಾಗಲೂ ಉಳಿಯುತ್ತದೆ. ಬೇಕಾದುದನ್ನು ಪಡೆ ಯಲು ಸಿಎ ಪ್ರಮಾಣಪತ್ರವು ಸಹಾಯ ಮಾಡುತ್ತದೆ ಎಂದರು.
ಸಿಎ ದೀಪಿಕಾ ವಸಾನಿ ಮಾತನಾಡಿ, ಸಿಎ ವ್ಯಾಸಂಗವನ್ನು ಪಿಯುಸಿ ಹಂತದಲ್ಲಿಯೇ ಪ್ರಾರಂಭಿಸುವುದು ಅತ್ಯುತ್ತಮ ಆಯ್ಕೆಯಾ ಗಿದೆ. ನಾವು ಯಾವಾಗಲೂ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸಿದ್ಧಹಸ್ತರು. ಸಿಎ ಕೋರ್ಸ್ ಕಷ್ಟವಾಗಬಹುದು ಅಥವಾ ಕಷ್ಟ ವಾಗದಿರಬಹುದು, ಆದರೆ ನೀವು ಅದನ್ನು ಪ್ರಯತ್ನಿಸದೆ ದೂರ ತಳ್ಳಿದರೆ ನೀವು ಖಂಡಿತವಾಗಿಯೂ ವಿಷಾದಿಸುತ್ತೀರಿ. ಸಿಎ ಫೌಂಡೇಶನ್ ಕೋರ್ಸ್ ಭವಿಷ್ಯದಲ್ಲಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ನಿಮ್ಮನ್ನು ಸಿದ್ಧಪಡಿಸುತ್ತದೆ. ಯಶಸ್ಸಿನ ವಿಳಂಬವು ಗಳಿಕೆಯ ವಿಳಂಬವೂ ಆಗಿದೆ ಎಂದರು.
ಶಕ್ತಿ ಎಜುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಸಂಜಿತ್ ನಾಯಕ್ ಮಾತನಾಡಿ, ಕೆವಿಸಿ ಅಕಾಡಮಿಯೊಂದಿಗೆ ಸಂಯೋಜನೆ ಹೊಂದಿದ್ದಕ್ಕೆ ಸಂತೋಷವಾಗುತ್ತಿದೆ. ಕೆವಿಸಿ ಅಕಾಡಮಿಯ ಸಹಯೋಗದೊಂದಿಗೆ ಕಲಿಕೆಯು ಹೆಚ್ಚು ಸಂವಾದಾತ್ಮಕ, ಪರಿಶೋಧ ನಾತ್ಮಕ, ಪರಿಣಾಮಕಾರಿಯಾಗಿರುತ್ತದೆ. ಅನುಭವಿ ಶಿಕ್ಷಕ ವೃಂದವು ಎಲ್ಲ ವಿದ್ಯಾರ್ಥಿಗಳಿಗೆ ಫಲಪ್ರದ ಫಲಿತಾಂಶವನ್ನು ನೀಡಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಶಕ್ತಿ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ. ರಾಜಾರಾಮ್ ರಾವ್, ಆಡಳಿತಾಧಿಕಾರಿ ಡಾ. ಕೆ.ಸಿ ನಾಯಕ್, ಪ್ರಧಾನ ಸಲಹೆಗಾರ ರಮೇಶ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ., ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಸಂಯೋಜಕಿ ನೀಮಾ ಸಕ್ಸೇನಾ, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.
ದ್ವಿತೀಯ ಪಿಯು ವಾಣಿಜ್ಯ ವಿದ್ಯಾರ್ಥಿಗಳಾದ ರಕ್ಷಾ ಎಂ. ಹೊಳ್ಳ ಮತ್ತು ದೀಕ್ಷಾ ಎಂ. ಹೊಳ್ಳ ಪ್ರಾರ್ಥಿಸಿದರು. ವಾಣಿಜ್ಯ ಉಪನ್ಯಾಸಕಿ ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು.