ಫೆಲೆಸ್ತೀನ್ ಪ್ರಧಾನಿ ಟೀಕಾಕಾರನ ಸಾವನ್ನು ಖಂಡಿಸಿ ರಮಲ್ಲಾದಲ್ಲಿ ಬೃಹತ್ ಪ್ರತಿಭಟನೆ

Update: 2021-06-27 18:19 GMT

ರಮಲ್ಲಾ,ಜೂ.27: ಫೆಲೆಸ್ತೀನ್ ಅಧ್ಯಕ್ಷ ಮುಹಮ್ಮದ್ ಅಬ್ಬಾಸ್ ಅವರ ಕಟ್ಟಾ ಟೀಕಾಕಾರರಲ್ಲಿ ಒಬ್ಬರಾದ ನಿಝಾರ್ ಬನಾಟಂ ಅವರು ಭದ್ರತಾಪಡೆಗಳ ಕಸ್ಟಡಿಯಲ್ಲಿ ಸಾವನ್ನಪ್ಪಿದ ಘಟನೆಯನ್ನು ವಿರೋಧಿಸಿ ಬೀದಿಗಿಳಿದು ಪ್ರದರ್ಶನ ನಡೆಸಿದ ಪ್ರತಿಭಟನಕಾರರನ್ನು ಚದುರಿಸಲು ಫೆಲೆಸ್ತೀನ್ ಆಡಳಿತವು ಶನಿವಾರ ಪಶ್ಚಿಮ ದಂಡೆಯ ರಮಲ್ಲಾದಲ್ಲಿ ಭಾರೀ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಿತ್ತು.

ನಿಝಾರ್ ಬನಾಟ್ ಉಳಿದುಕೊಂಡಿದ್ದ ಅವರ ಸಂಬಂಧಿಯೊಬ್ಬರ ಮನೆಗೆ ಗುರುವಾರ ನಸುಕಿನಲ್ಲಿ ದಳಿ ನಡೆಸಿದ್ದ ಫೆಲೆಸ್ತೀನ್ ಭದ್ರತಾಪಡೆಗಳು ಬನಾಟ್ ಅವರನ್ನು ಬಂಧಿಸಿದ್ದವು. ಬನಾಟ್ ಅವರನ್ನು ಬಂಧಿಸುವ ಮುನ್ನ ಭದ್ರತಾ ಸಿಬ್ಬಂದಿ ಅವರ ತಲೆಯ ಮೇಲೆ ಲೋಹದ ರಾಡ್‌ ನಿಂದ ಹಲವು ಬಾರಿ ಹೊಡೆದಿವೆ ಎಂದು ಕುಟುಂಬಿಕರು ಆರೋಪಿಸಿದ್ದಾರೆ.
 
ಬನಾಟ್ ಅವರ ನಿಧನವು ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಪ್ರತಿಭಟನೆಯ ಕಿಡಿಯನ್ನು ಎಬ್ಬಿಸಿತ್ತು ಹಾಗೂ ಘಟನೆಯ ಘಟನೆಯ ಬಗ್ಗೆ ತನಿಖೆಯಾಗಬೇಕೆಂದು ಅಂತಾರಾಷ್ಟ್ರೀಯ ಸಮುದಾಯದಿಂದಲೂ ಬಲವಾದ ಒತ್ತಾಯ ಕೇಳಿಬಂದಿದೆ.
 
ಬನಾಟ್ ಸಾವನ್ನು ಖಂಡಿಸಿ, ಇಂದು ಬೀದಿಗಿಳಿದ ಪ್ರತಿಭಟನಕಾರರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಅಶ್ರುವಾಯು ಸಿಡಿಸಿದರು ಹಾಗೂ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡವರಲ್ಲಿ ಬಂಧಿತರಾದವರ ಸಂಖ್ಯೆ ಹಾಗೂ ಗಾಯಾಳುಗಳ ಸಂಖ್ಯೆಯ ಬಗ್ಗೆ ಫೆಲೆಸ್ತೀನ್ ಆಡಳಿತವು ಈವರೆಗೆ ಯಾವುದೇ ಅಧಿಕೃತ ದಾಖಲೆಗಳನ್ನು ಬಿಡುಗಡೆಗೊಳಿಸಿಲ್ಲ.
  
43 ವರ್ಷ ವಯಸ್ಸಿನ ಬನಾಟ್ ಸಾಮಾಜಿಕ ಹೋರಾಟಗಾರಾಗಿದ್ದರು. ಕಡಿಮೆ ಬಾಳಿಕೆ ಅವಧಿಯ ಕೋವಿಡ್-19 ಲಸಿಕೆಯನ್ನು ಈ ತಿಂಗಳು ಇಸ್ರೇಲ್ನಿಂದ ಖರೀದಿ ಸಿರುವುದು ಸೇರಿದಂTE ಫೆಲೆಸ್ತೀನ್ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಅವರು ಭ್ರಷ್ಟಾಚಾರಗಳನ್ನು ಎಸಗಿದ್ದಾರೆ ಎಂದು ಬನಾಟ್ ಆಪಾದಿಸಿದ್ದರು. ಮೇನಲ್ಲಿ ನಡೆಯಬೇಕಿದ್ದ ಚುನಾವಣೆಯನ್ನು ಅಬ್ಬಾಸ್ ಮುಂದೂಡಿರುವುದನ್ನು ಕೂಡಾ ಬನಾಟ್ ಟೀಕಿಸಿದ್ದರು‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News