×
Ad

ಕೊಡವೂರು ಮಸೀದಿ: ಕೆಆರ್‌ಎಸ್ ಪಕ್ಷದಿಂದ ಡಿಸಿಗೆ ಮನವಿ

Update: 2021-06-28 18:39 IST

ಉಡುಪಿ, ಜೂ.28: ಕೊಡವೂರು ಕಲ್ಮತ್ ಮಸೀದಿಗೆ ಹಂಚಿಕೆಯಾದ ಜಮೀನು ವಾಪಾಸ್ ಪಡೆದಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಉಡುಪಿ ಜಿಲ್ಲಾ ಘಟಕ ಸೋಮವಾರ ಉಡುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಂ.ಇಕ್ಬಾಲ್ ಕುಂಜಿಬೆಟ್ಟು, ಉಪಾಧ್ಯಕ್ಷೆ ಜಾಹಿದ ಬಾನು, ಕಾನೂನು ಘಟಕದ ಅಧ್ಯಕ್ಷ ಕೆ.ಭರತ್ ಪೈ, ಜಿಲ್ಲಾ ಕಾರ್ಯದರ್ಶಿ ಹನೀಫ್ ಕಾಪು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News