×
Ad

ಟಿಪ್ಪರ್ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Update: 2021-06-28 21:26 IST

ಪಡುಬಿದ್ರಿ: ಮುದರಂಗಡಿಯ ಅಳುಂಬೆಯಲ್ಲಿ ಡಾಮಾರು ಮಿಕ್ ಪ್ಲಾಂಟ್ ಸೈಟಿನಿಂದ ಟಿಪ್ಪರ್ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಪಡುಬಿದ್ರಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.  

ಆರೋಪಿಗಳನ್ನು ಕಂಚಬಲಿಕೆ ಅಡ್ವೆ, ಪಲಿಮಾರು ಗ್ರಾಮದ ನಿವಾಸಿ ಅಶ್ರಫ್ (27) ಹಾಗೂ ಉತ್ತರ ಕನ್ನಡ ಮೂಲದ ಪಡುಬಿದ್ರಿ ಕಂಚಿನಡ್ಕ ಬಾಡಿಗೆ ಮನೆಯ ನಿವಾಸಿ ಮುನ್ನ ಯಾನೆ ಮಜೀದ್ ಸೇಠ್(38) ಎಂದು ಗುರುತಿಸಲಾಗಿದೆ.  ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 

ಕುಂದಾಪುರದ ಹಂಗ್ಳೂರಿನ ನಾಗಯ್ಯ ಶೆಟ್ಟಿ ಎಂಬವರಿಗೆ ಸೇರಿದ ಸುಮಾರು ಟಿಪ್ಪರ್ ಜೂನ್ 16ರಂದು ಮುದರಂಗಡಿ ಗ್ರಾಮ ಅಳುಂಬೆಯ ಡಾಮರ್ ಮಿಕ್ ಪ್ಲಾಂಟ್ನ ಸೈಟ್‍ನಿಂದ ಕಳವಾಗಿತ್ತು. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಬ್ಬರು ಆರೋಪಿಗಳಿಂದ 30,000 ನಗದು, ಒಂದು ಮಾರುತಿ ಶಿಫ್ಟ್ ಕಾರು 3 ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News