×
Ad

2-ಡಿಜಿ ಔಷಧ ವಾಣಿಜ್ಯ ಬಳಕೆಗೆ ಸಿದ್ಧ; ಗರಿಷ್ಠ ಮಾರಾಟ ಬೆಲೆ 990 ರೂ. ನಿಗದಿ

Update: 2021-06-28 22:04 IST

ಹೊಸದಿಲ್ಲಿ, ಜೂ.28: ಕೊರೋನ ಸೋಂಕಿತರ ಚಿಕಿತ್ಸೆಗೆ ಬಳಸುವ 2-ಡಿಜಿ (2-ಡಿಯಾಕ್ಸಿ-ಡಿ-ಗ್ಲುಕೋಸ್) ಔಷಧ ದೇಶದಲ್ಲಿ ವಾಣಿಜ್ಯ ಬಳಕೆಗೆ ಲಭ್ಯವಿದ್ದು, ಆರಂಭದಲ್ಲಿ ಮೆಟ್ರೋ ಮತ್ತು ಪ್ರಥಮ ಹಂತದ ನಗರಗಳ ಆಸ್ಪತ್ರೆಗಳಲ್ಲಿ ಲಭ್ಯವಿರಲಿದೆ ಎಂದು ಡಾ. ರೆಡ್ಡೀಸ್ ಲ್ಯಾಬೊರೇಟರಿ ಸೋಮವಾರ ಹೇಳಿದೆ. 

ಬಾಯಿಯ ಮೂಲಕ ಸೇವಿಸುವ ಈ ಔಷಧವನ್ನು ಡಿಆರ್ಡಿಒ ಮತ್ತು ರೆಡ್ಡೀಸ್ ಲ್ಯಾಬೊರೇಟರಿ ಅಭಿವೃದ್ಧಿಗೊಳಿಸಿದೆ. ದೇಶದಾದ್ಯಂತದ ಪ್ರಮುಖ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಔಷಧವನ್ನು ಒದಗಿಸಲಾಗುವುದು. ಆರಂಭದಲ್ಲಿ ಮೆಟ್ರೋ ಮತ್ತು ಪ್ರಥಮ ಹಂತದ ನಗರಗಳ ಆಸ್ಪತ್ರೆಗಳಲ್ಲಿ ಮತ್ತು ಮುಂದಿನ ದಿನಗಳಲ್ಲಿ ದೇಶದ ಉಳಿದೆಡೆ ಲಭ್ಯವಿರಲಿದೆ ಎಂದು ಡಾ. ರೆಡ್ಡೀಸ್ ಲ್ಯಾಬೊರೇಟರಿ ಹೇಳಿದೆ. 

ಗರಿಷ್ಟ ಮಾರಾಟ ಬೆಲೆಯನ್ನು 990 ರೂ.ಗಳಿಗೆ ನಿಗದಿಗೊಳಿಸಿದ್ದು ಸರಕಾರಿ ಸಂಸ್ಥೆಗಳಿಗೆ ದರದಲ್ಲಿ ರಿಯಾಯಿತಿ ನೀಡಲಾಗುವುದು. ಬಾಯಿಯ ಮೂಲಕ ಸೇವಿಸುವ ಈ ಔಷಧವನ್ನು ವೈದ್ಯರ ಸೂಚನೆಯಂತೆ ಮತ್ತು ಅರ್ಹತೆ ಪಡೆದ ವೈದ್ಯರ ಮೇಲುಸ್ತುವಾರಿಯಲ್ಲಿ, ಸಾಧಾರಣದಿಂದ ತೀವ್ರ ಸೋಂಕಿನ ಲಕ್ಷಣಗಳಿದ್ದು ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ನೀಡಲಾಗುವುದು. ಈಗ ದೇಶದಲ್ಲಿ ಕೊರೋನ ಸೋಂಕಿತರಿಗೆ ಒದಗಿಸುತ್ತಿರುವ ಚಿಕಿತ್ಸೆಯ ಜೊತೆಗೆ 2-ಡಿಜಿ ಔಷಧ ನೀಡಲಾಗುವುದು. ಈ ತುರ್ತು ಅಗತ್ಯದ ಸಂದರ್ಭದಲ್ಲಿ ಬಳಕೆಗೆ ಮೇ 1ರಂದು ಅನುಮೋದನೆ ದೊರಕಿದೆ ಎಂದು ಡಾ. ರೆಡ್ಡೀಸ್ ಲ್ಯಾಬೊರೇಟರಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News