×
Ad

ಮದ್ದ: ಬಡ ವಿಧವೆಗೆ ಜಮಾಅತೆ ಇಸ್ಲಾಮೀ ಹಿಂದ್‌ ನಿಂದ ಮನೆ ಕೊಡುಗೆ

Update: 2021-06-28 22:28 IST

ಮಂಗಳೂರು, ಜೂ. 28: ಜಮಾಅತೆ ಇಸ್ಲಾಮೀ ಹಿಂದ್‌ ಮಂಗಳೂರು ಇದರ ಸಮಾಜ ಸೇವಾ ಘಟಕದ ವತಿಯಿಂದ, ಬಂಟ್ವಾಳ ತಾಲೂಕಿನ ಬಾಂಬಿಲ ಸಮೀಪದ ಮದ್ದ ಎಂಬಲ್ಲಿ ಬಡ ವಿಧವೆಯೊಬ್ಬರಿಗೆ ದಾನಿಗಳ ಸಹಾಯದಿಂದ ಮನೆಯೊಂದನ್ನು ನಿರ್ಮಿಸಿ ಇತ್ತೀಚೆಗೆ ಹಸ್ತಾಂತರಿಸಲಾಯಿತು.

ಪ್ರಸ್ತುತ ಕಾರ್ಯಕ್ರಮವನ್ನು, ಜಮಾಅತೆ ಇಸ್ಲಾಮೀ ಹಿಂದ್‌ ಬಂಟ್ವಾಳ ವರ್ತುಲದ ಹಿರಿಯ ಸದಸ್ಯರೂ ನಿವೃತ್ತ ಅಧ್ಯಾಪಕರೂ ಆದ ಅಬ್ದುಸ್ಸಲಾಮ್‌ ಮಾಸ್ಟರ್‌ ಉದ್ಘಾಟಿಸಿ, ಸಮಾಜ ಸೇವೆಯ ಅಗತ್ಯ ಮತ್ತು ಅನಿವಾರ್ಯತೆಯ ಕುರಿತು ಮಾತಾಡಿದರು. ಅನುಪಮ ಮಹಿಳಾ ಮಾಸಿಕದ ವ್ಯವಸ್ಥಾಪಕರಾದ ಮುಹಮ್ಮದ್ ಮುಹ್ಸಿನ್‌, ಆರ್ಥಿಕ ಸಹಾಯ ನೀಡಿ ಸಹಕರಿಸಿದವರಿಗೂ ಫಲಾನುಭವಿ ಕುಟುಂಬಕ್ಕೂ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಮುಹಮ್ಮದ್ ಇಸ್‌ಹಾಕ್‌‌‌  ಫರಂಗಿಪೇಟೆ ಹಾಗೂ ಬಾಂಬಿಲ ಜುಮಾ ಮಸೀದಿ ಕಮಿಟಿಯ ಸದಸ್ಯರಾದ ಮುಹಮ್ಮದ್ ಶರೀಫ್‌, ಜಮಾಅತೆ ಇಸ್ಲಾಮೀ ಹಿಂದ್‌ ಬಂಟ್ವಾಳ ಅಧ್ಯಕ್ಷರಾದ ಇಲ್ಯಾಸ್‌ ಅಹ್ಮದ್‌, ಅಬುಸ್ವಾಲೀಹ್ ಕೆಳಗಿನ ಪೇಟೆ, ಶಂಶೀರ್‌ ಮೆಲ್ಕಾರ್‌ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News