×
Ad

​ಜೂ.29: ಕೋವಿಡ್ ನಿರೋಧಕ ಲಸಿಕೆ ಕಾರ್ಯಕ್ರಮ

Update: 2021-06-28 23:33 IST

ಮಂಗಳೂರು, ಜೂ.28: ದ.ಕ. ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳ ಲಸಿಕಾ ಶಿಬಿರಕ್ಕೆ ಸಂಬಂಧಿಸಿದಂತೆ ಜೂ.29ರಂದು ಕಾಲೇಜಿನಲ್ಲಿ ನೋಂದಾಯಿಸಿರುವ ಪದವಿ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಬೋಧಕೇತರ ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡಲಾಗುವುದು. ಫಲಾನುವಿಭಗಳು ಕಾಲೇಜು ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್‌ನೊಂದಿಗೆ ಹಾಜರಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

*ಮಂಗಳೂರು ತಾಲೂಕಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಅಡ್ಯಾರ್, ಮಂಗಳೂರು ವಿವಿಯ ಲೆಕ್ಚರ್ ಕಾಂಪ್ಲೆಕ್ಸ್ ಮಂಗಳ ಗಂಗೋತ್ರಿ ಕೊಣಾಜೆ, ಸೈಂಟ್ ಆ್ಯಗ್ನೇಸ್ ಕಾಲೇಜು ಬೆಂದೂರ್‌ವೆಲ್ ಸೈಂಟ್ ಅಲೋಯಸ್ ಕಾಲೇಜು ಮಂಗಳೂರು. ಎಸ್‌ಡಿಪಿಟಿ ಪ್ರಥಮ ದರ್ಜೆ ಕಾಲೇಜು ಕಟೀಲು, ಶ್ರೀ ಧವಳ ಕಾಲೇಜು ಮೂಡುಬಿದಿರೆ.

*ಬಂಟ್ವಾಳ ತಾಲೂಕು: ಪಿ.ಎ. ಕಾಲೇಜು ಮುಡಿಪು, ಪಾಲಿಟೆಕ್ನಿಕ್ ಕಾಲೇಜು ಬಂಟ್ವಾಳ.

*ಪುತ್ತೂರು ತಾಲೂಕು: ಸೈಂಟ್ ಫಿಲೋಮಿನಾ ಕಾಲೇಜು ಪುತ್ತೂರು, ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜು ಪುತ್ತೂರು.

*ಸುಳ್ಯ ತಾಲೂಕು: ಶಾರದಾ ಮಹಿಳಾ ಕಾಲೇಜು ಸುಳ್ಯ.

*ಬೆಳ್ತಂಗಡಿ ತಾಲೂಕು: ಶ್ರೀಗುರುದೇವ ಪ್ರಥಮ ದರ್ಜೆ ಕಾಲೇಜು, ಕಲ್ಪತರು ನರ್ಸಿಂಗ್ ಕಾಲೇಜು, ಸರಕಾರಿ ಐಟಿಐ ಕಾಲೇಜು ಮಳಲಿ, ಮನ್ಸರ್ ಪ್ಯಾರಾಮೆಡಿಕಲ್ ಕಾಲೇಜು ಗೇರುಕಟ್ಟೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News