ಕಾಸರಗೋಡಿನಲ್ಲೂ ಶತಕ ದಾಖಲಿಸಿದ ಪೆಟ್ರೋಲ್ ದರ
Update: 2021-06-29 13:36 IST
ಕಾಸರಗೋಡು, ಜೂ.29: ಪೆಟ್ರೋಲ್ ದರ ಕಾಸರಗೋಡಿನಲ್ಲೂ ಶತಕದ ಗಡಿ ದಾಟಿದೆ. ಮಂಗಳವಾರ ಪೆಟ್ರೋಲ್ ಲೀಟರ್ ಗೆ 35 ಪೈಸೆ ಹೆಚ್ಚಳವಾಗಿದ್ದು, ಇದರಿಂದ ಒಂದು ಲೀಟರ್ ಪೆಟ್ರೋಲ್ ಬೆಲೆ 100 ರೂ. ದಾಟಿದೆ.
ಸೋಮವಾರ 99. 72 ರೂ. ಆಗಿತ್ತು. ಪ್ರೀಮಿಯಂ ಪೆಟ್ರೋಲ್ ಬೆಲೆ 103.62 ರೂ.ಗೆ ತಲುಪಿದೆ.
ಡೀಸೆಲ್ ಬೆಲೆಯಲ್ಲೂ ಹೆಚ್ಚಳವಾಗಿದ್ದು, ಲೀಟರ್ ಗೆ 95 ರೂ. ದಾಟಿದೆ. ಈ ತಿಂಗಳು ಚಿಲ್ಲರೆ ಪೈಸೆಯಾಗಿ 17 ಬಾರಿ ತೈಲ ಬೆಲೆ ಏರಿಕೆಯಾಗಿದೆ.
ಕಾಸರಗೋಡಿನಲ್ಲಿ ಇದೇ ಮೊದಲ ಬಾರಿ ಪೆಟ್ರೋಲ್ ಬೆಲೆ 100 ರೂ . ದಾಟಿದೆ. ತೈಲ ಬೆಲೆ ಏರಿಕೆ ವಿರುದ್ಧ ದೇಶ ದಾದ್ಯಂತ ಆಕ್ರೋಶ ಹೆಚ್ಚುತ್ತಿದ್ದರೂ ದಿನಂಪ್ರತಿ ಬೆಲೆ ಏರಿಕೆ ಮುಂದುವರಿದಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಜೊತೆಗೆ ಬದುಕು ದುಸ್ತರವಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.