ಯುವ ಕಾಂಗ್ರಸ್ ನಿಂದ ಕಾಸರಗೋಡು ಜಿ.ಪಂಗೆ ಮುತ್ತಿಗೆ, ಪ್ರತಿಭಟನೆ
ಕಾಸರಗೋಡು, ಜೂ.29: ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣದ ಆರೋಪಿಗಳ ಪತ್ನಿಯರಿಗೆ ಜಿಲ್ಲಾಸ್ಪತ್ರೆಯಲ್ಲಿ ಉದ್ಯೋಗ ನೀಡಿರುವ ಜಿಲ್ಲಾ ಪಂಚಾಯತ್ ತೀರ್ಮಾನ ಹಾಗೂ ಈ ಕುರಿತು ಯುಡಿಎಫ್ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಮಂಡಿಸಿದ ನಿರ್ಣಯವನ್ನು ತಿರಸ್ಕರಿರುವುದನ್ನು ಖಂಡಿಸಿ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಇಂದು ಕಾಸರಗೋಡು ಜಿಲ್ಲಾ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಲಾಯಿತು.
ಕಚೇರಿಯೊಳಗೆ ನುಗ್ಗಲೆತ್ನಿಸಿದ ಪ್ರತಿಭಟನಾನಿರತರನ್ನು ಪೊಲೀಸರು ತಡೆದರು. ಬಳಿಕ ಕಚೇರಿ ದ್ವಾರದ ಬಳಿ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಪಿ ಪ್ರದೀಪ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಆರೋಪಿಗಳ ಪತ್ನಿಯರ ನೇಮಕಾತಿಯನ್ನು ಕೂಡಲೇ ರದ್ದುಪಡಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಕಾರ್ತಿಕೇಯನ್ ಪೆರಿಯ, ಇಸ್ಮಾಯೀಲ್ ಚಿತ್ತಾರಿ, ಮ್ಯಾಥ್ಯೂ ಬದಿಯಡ್ಕ, ರತೀಶ್ ಇರಿಯ, ಸಂತೋಷ್ ಕ್ರಾಸ್ತ, ಸುಭಾಷ್ ಪೆರಿಯ, ಮಹೇಶ್ ಕೆ.ಕೆ ಮೊದಲಾದವರು ನೇತೃತ್ವ ನೀಡಿದರು.