ಕೊಣಾಜೆ ಗ್ರಾ.ಪಂ. ಒಂದನೇ ವಾರ್ಡ್ ನಲ್ಲಿ ಸ್ವಚ್ಚತಾ ಅಭಿಯಾನ
ಕೊಣಾಜೆ, ಜೂ.29: ಕೊಣಾಜೆ ಸಪ್ತಸ್ವರ ಕಲಾ ತಂಡಕ್ಕೆ ಸಂಪರ್ಕವಿರುವ ಚರಂಡಿಯನ್ನು ಸ್ವಚ್ಛಗೊಳಿಸಿ ಹದಗೆಟ್ಟ ರಸ್ತೆಯನ್ನು ರವಿವಾರ ಕೋಣಾಜೆ ಗ್ರಾ.ಪಂ. ಒಂದನೇ ವಾರ್ಡ್ ಸದಸ್ಯರು ಮತ್ತು ಕೋಡಿಜಾಲ್ ಖಿದ್ಮತುಲ್ ಇಸ್ಲಾಂ ಸಂಘಟನೆಯ ಸದಸ್ಯರು, ಊರಿನ ನಾಗರಿಗರು ಸೇರಿ ಸರಿಪಡಿಸಿದರು ಹಾಗೂ ಕೊಣಾಜೆ ಪ್ರೌಢಶಾಲೆ ಬಳಿಯಿಂದ ಕೋಡಿಜಾಲ್ ಮಸೀದಿಯವರೆಗಿನ ರಸ್ತೆ ಮತ್ತು ಕಂಗುಹಿತ್ಲು ಹೋಗುವ ರಸ್ತೆಯ ಇಕ್ಕೆಲಗಳನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.
ಈ ಸಂದರ್ಭದಲ್ಲಿ ಕೊಣಾಜೆ ಪಂಚಾಯತ್ ಸದಸ್ಯರಾದ ಅಚ್ಯುತ ಗಟ್ಟಿ, ಮುಹಮ್ಮದ್ ಇಕ್ಬಾಲ್ ಕೊಣಾಜೆ, ರವಿಕುಮಾರ್ ಡಿಸೋಜ, ಖಿದ್ಮತುಲ್ ಇಸ್ಲಾಮ್ ಅಸೋಸಿಯೇಶನ್ ಅಧ್ಯಕ್ಷ ಅಮೀರ್ ಕೋಡಿಜಾಲ್, ಕಾರ್ಯದರ್ಶಿ ಶರೀಫ್ ಕೋಡಿಜಾಲ್, ಉಪಾಧ್ಯಕ್ಷ ರಝಾಕ್ ಕಂಗುಹಿತ್ಲು, ಪದಾಧಿಕಾರಿಗಳಾದ ಹಸೈನಾರ್ ಕೊಣಾಜೆ, ಕಬೀರ್ ಕಂಗುಹಿತ್ಲು, ಅಶ್ರಫ್ ಒಳಗುಡ್ಡೆ, ರಹ್ಮಾನ್ ಕಂಗುಹಿತ್ಲು, ಸ್ಥಳೀಯರಾದ ಗೋಪಾಲ, ಜಿ.ಪಿ.ಖಾದರ್, ನಝೀರ್, ಇಸ್ಮಾಯೀಲ್ ಮಲಾರ್, ಅಬ್ದುಲ್ಲಾ ಗುಂಡ್ಯ, ವಾಸು ಕೊಣಾಜೆ, ರಫೀಕ್ ಮರಕಳಬೆಟ್ಟು, ಚಿತ್ತರಂಜನ್ ಮತ್ತಿತರರು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದರು.