'ಡ್ರೀಮ್ ಬಾಯ್ಸ್' ತಂಡದ ಹತ್ತನೆ ವರ್ಷದ ಲಾಂಛನ ಬಿಡುಗಡೆ
ಮಂಜೇಶ್ವರ, ಜೂ.28: ಬಡ ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕ ಸಹಾಯ ಸೇರಿ ಮತ್ತಿತರ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಡ್ರೀಮ್ ಬಾಯ್ಸ್ ಬಾಕ್ರಬೈಲ್ ತಂಡವು ಹತ್ತನೆ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನೂತನ ಲಾಂಛನವನ್ನು
ಬಾಕ್ರಬೈಲ್ ನಗರದಲ್ಲಿ ಬಿಡುಗಡೆ ಮಾಡಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡ ರೋಗಿಗಳಿಗೆ ಆರ್ಥಿಕ ಸಹಾಯ, ಬಾಕ್ರಬೈಲ್‌ನಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ, ಬಸ್ ನಿಲ್ದಾಣ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಪೂರೈಕೆ ಹಾಗೂ ಕೇರಳ ರಾಜ್ಯದ ನಿಲಂಬೂರ್‌ನಲ್ಲಿ ಪ್ರವಾಹ ಸಂತ್ರಸ್ತರಿಗೆ ಆರ್ಥಿಕ ಸಹಾಯ ಸೇರಿ ಹಲವು ಸಾಮಾಜಿಕ ಕಾರ್ಯಗಳನ್ನು ಸಂಘವು ಮಾಡುತ್ತಿದೆ.
ಲಾಂಛನ ಬಿಡುಗಡೆ ಕಾರ್ಯಕ್ರಮವನ್ನು ಡ್ರೀಮ್ ಬಾಯ್ಸ್ ತಂಡದ ಮಾಜಿ ಅಧ್ಯಕ್ಷ ಉಮರ್ ನಡಿಬೈಲ್ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಸೆಯ್ಯದ್ ಅಲವಿ ಸ್ವಾಗತಿಸಿದರು. ಅಧ್ಯಕ್ಷತೆಯನ್ನು ಅಬ್ದುಲ್ ಅಝೀಝ್ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸಿಯಾಬುದ್ದಿನ್ ಎನ್. ಎಸ್., ಅವರು ವಿಷಯ ಮಂಡನೆಯನ್ನು ಮಾಡಿದರು. ಮುಸ್ತಫ ಧನ್ಯವಾದಗಳನ್ನು ಅರ್ಪಿಸಿದರು.