ದ.ಕ.ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್‌ಗೆ ಓರ್ವ ಬಲಿ
Update: 2021-06-29 20:04 IST
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಮಂಗಳವಾರ ಬ್ಲ್ಯಾಕ್ ಫಂಗಸ್‌ಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್‌ಗೆ ಬಲಿಯಾದವರ ಸಂಖ್ಯೆ 19ಕ್ಕೇರಿದೆ. ಇದರಲ್ಲಿ ದ.ಕ.ಜಿಲ್ಲೆಯ 4 ಮತ್ತು ಹೊರಜಿಲ್ಲೆಯ 15 ಮಂದಿ ಸೇರಿದ್ದಾರೆ.
ಮಂಗಳವಾರ ಬ್ಲ್ಯಾಕ್ ಫಂಗಸ್‌ನ ಹೊಸ ಪ್ರಕರಣ ದಾಖಲಾಗಿಲ್ಲ. ಆದರೆ ಒಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವುದರೊಂದಿಗೆ ಈವರೆಗೆ ಗುಣಮುಖರಾದವರ ಸಂಖ್ಯೆ 36ಕ್ಕೇರಿದೆ.
ಸದ್ಯ ಜಿಲ್ಲೆಯಲ್ಲಿ 27 ಸಕ್ರಿಯ ಪ್ರಕರಣಗಳಿದ್ದು, ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ 8 ದ.ಕ. ಜಿಲ್ಲೆಗೆ ಮತ್ತು 19 ಮಂದಿ ಹೊರಜಿಲ್ಲೆಗೆ ಸೇರಿದವರಾಗಿದ್ದಾರೆ.