×
Ad

ಖಾಸಗಿ ಬಸ್‌ದರ ಹೆಚ್ಚಳವು ಗಾಯದ ಮೇಲೆ ಬರೆ: ಸಿಪಿಎಂ

Update: 2021-06-29 21:12 IST

ಉಡುಪಿ, ಜೂ.29: ಲಾಕ್ಡೌನ್ ನಿಯಮಗಳು ಸಡಿಲಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸಿಟಿ ಬಸ್ ಮತ್ತು ಇತರೆ ಖಾಸಗಿ ಬಸ್ ದರವನ್ನು ಶೇ.25ರಷ್ಟು ಹೆಚ್ಚಿಸುವುದಾಗಿ ಹೇಳಿದ ಖಾಸಗಿ ಬಸ್ಸುಗಳ ಮಾಲಕರ ಸಂಘಗಳ ನಿರ್ಧಾರವನ್ನು ಸಿಪಿಐ(ಎಂ) ತೀವ್ರವಾಗಿ ವಿರೋಧಿಸಿದೆ.

ಸರಕಾರದೊಂದಿಗೆ ತೆರಿಗೆ ವಿನಾಯತಿ ಸಹಿತ ವಿವಿಧ ರಿಯಾಯತಿಗಳಿಗಾಗಿ ಒತ್ತಡ ಹಾಕಿ ಕೆಲವು ರಿಯಾಯಿತಿಗಳನ್ನು ಪಡೆದಿರುವ ಬಸ್ ಮಾಲಕರು ಜನತೆಯಿಂದಲೂ ದೋಚುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಸಿಪಿಐ(ಎಂ) ಆರೋಪಿಸಿದೆ.

ಈಗಾಗಲೆ ದುಡಿಮೆಯಿಲ್ಲದೆ ಬಳಲಿರುವ ಪ್ರಯಾಣಿಕರ ಮೇಲೆ ಹೊರೆ ಹಾಕುವ ಇಂತಹ ಪ್ರಯತ್ನಗಳಿಗೆ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಅವಕಾಶ ನೀಡಬಾರದು ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News