×
Ad

ಜೂ.30: ವೆನ್ಲಾಕ್ ಆಯುಷ್ ಬ್ಲಾಕ್‌ನಲ್ಲಿ ಎರಡನೇ ಡೋಸ್ ಲಭ್ಯ

Update: 2021-06-29 22:21 IST

ಮಂಗಳೂರು, ಜೂ.29: ನಗರದ ವೆನ್ಲಾಕ್ ಆಯುಷ್ ಬ್ಲಾಕ್‌ನಲ್ಲಿ ಜೂ.30ರಂದು ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಯ ಎರಡನೇ ಡೋಸ್ ಲಭ್ಯವಿದೆ.

ಕೋವಿಶೀಲ್ಡ್ ಮೊದಲ ಡೋಸ್ ಪಡೆದು 84 ದಿನ ಪೂರ್ತಿಯಾದವರು ಹಾಗೂ ಕೋವಿಶೀಲ್ಡ್ ಪಡೆದ ಎನ್‌ಆರ್‌ಐ ಪ್ರಯಾಣಿಕರು 28 ದಿನಗಳಾದವರು ಎರಡನೇ ಡೋಸ್ ಪಡೆಯಬಹುದು

ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದು 28 ದಿನಗಳಾದ ಫಲಾನುಭವಿಗಳು ಎರಡನೇ ಡೋಸ್ ಹಾಗೂ 45 ವರ್ಷಕ್ಕಿಂತ ಮೇಲ್ಪಟ್ಟವರು ಕೋವ್ಯಾಕ್ಸಿನ್ ಮೊದಲ ಡೋಸ್ ಲಸಿಕೆ ಪಡೆಯಬಹುದು ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News