×
Ad

ಅಕ್ರಮ ಗಾಂಜಾ ಸಾಗಾಟ: ಓರ್ವನ ಸೆರೆ

Update: 2021-06-29 22:34 IST

ಬೈಂದೂರು, ಜೂ.29: ಸ್ಕೂಟರ್‌ನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವನನ್ನು ಬೈಂದೂರು ಪೊಲೀಸರು ಜೂ.26ರಂದು ಸಂಜೆ ವೇಳೆ ಅರೆಹೊಳೆ ಬೈಪಾಸ್ -ಹೇರೂರು ರಸ್ತೆಯ ಕೋಯಾನಗರ ಬಳಿ ಬಂಧಿಸಿದ್ದಾರೆ.

ಕಿರಿಮಂಜೇಶ್ವರ ಕೊಡೇರಿ ಬಳ್ಕಿನಬಾಗಿಲು ನಿವಾಸಿ ಜಾಫರ್ ಸಾದಿಕ್(42) ಬಂಧಿತ ಆರೋಪಿ. ಈತನಿಂದ 520 ಗ್ರಾಂ ತೂಕದ 15,000ರೂ. ಮೌಲ್ಯದ ಗಾಂಜಾ, 80ಸಾವಿರ ರೂ. ಮೌಲ್ಯದ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News