ಮೂಡುಬಿದಿರೆ: ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಣೆ
ಮೂಡುಬಿದಿರೆ: ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಮೂಡುಬಿದಿರೆ ವಿಧಾನಸಭಾ ಕ್ಷೇತ್ರಕ್ಕೆ ನೀಡಲ್ಪಟ್ಟ 2000 ಆಹಾರ ಧಾನ್ಯಗಳ ಕಿಟ್‍ಗಳ ವಿತರಣೆಗೆ ಶಾಸಕ ಉಮಾನಾಥ ಕೋಟ್ಯಾನ್ ತನ್ನ ಕಛೇರಿ "ಸೇವಕ"ದಲ್ಲಿ ಮಂಗಳವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ನೋದಾಯಿಸಲ್ಪಟ್ಟ ಕಾರ್ಮಿಕರಿಗೆ ಪ್ರಥಮ ಹಂತದ 2000 ಕಿಟ್‍ಗಳು ಬಂದಿವೆ. ಮೂಡುಬಿದಿರೆ, ಕಿನ್ನಿಗೋಳಿ ಮತ್ತು ಬಜ್ಪೆಗೆ 1,000 ಕಿಟ್‍ಗಳನ್ನು ವಿತರಿಸಲಾಗುವುದು. ಇನ್ನೂ ಹೆಚ್ಚಿಗೆ 10,000 ಕಿಟ್‍ಗಳ ಅಗತ್ಯವಿರುವ ಬಗ್ಗೆ ಇಲಾಖೆ ಮತ್ತು ಸರಕಾರಕ್ಕೆ ಮನವಿ ಮಾಡಲಾಗಿದ್ದು ಅದು ಬಂದ ನಂತರ ಎಲ್ಲರಿಗೂ ವಿತರಿಸಲಾಗುವುದು. ಇದು ನಮ್ಮ ತಾಲೂಕು, ಜಿಲ್ಲೆ, ರಾಜ್ಯ ಹಾಗೂ ದೇಶವನ್ನು ಬಿಟ್ಟು ತೊಲಗುವಂತೆ ಮಾಡಬೇಕಾಗಿದೆ. ನರೇಂದ್ರ ಮೋದಿಯವರ ಆಶಯದಂತೆ ಕಟ್ಟಡ ಕಾರ್ಮಿಕರಿಗೆ ಸಹಿತ ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನ್‍ನ್ನು ನೀಡುತ್ತಿದ್ದು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದರು.
ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್ ಆಳ್ವ, ಮಂಗಳೂರು ಎಪಿಎಂಸಿ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಉಪಾಧ್ಯಕ್ಷೆ ಸುಜಾತ ಶಶಿಧರ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯರಾದ ಸೌಮ್ಯ ಸಂದೀಪ್ ಶೆಟ್ಟಿ, ನವೀನ್ ಶೆಟ್ಟಿ, ಮೂಡಾ ಅಧ್ಯಕ್ಷ ಮೇಘನಾಥ ಶೆಟ್ಟಿ, ಸದಸ್ಯರಾದ ದಿನೇಶ್ ಪೂಜಾರಿ, ಲಕ್ಷ್ಮಣ್ ಪೂಜಾರಿ, ವಕೀಲರಾದ ಕೆ.ಆರ್.ಪಂಡಿತ್ ಮತ್ತು ಶಾಂತಿಪ್ರಸಾದ್ ಹೆಗ್ಡೆ ಈ ಸಂದರ್ಭದಲ್ಲಿದ್ದರು.
ಮಂಡಲದ ಪ್ರಧಾನ ಕಾರ್ಯದರ್ಶಿ ಗೋಪಾಲ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.