ಮಿಥಾಲಿ ರಾಜ್, ಆರ್.ಅಶ್ವಿನ್ ಗೆ ಖೇಲ್ ರತ್ನ:ಬಿಸಿಸಿಐ ಶಿಫಾರಸು

Update: 2021-06-30 10:08 GMT

ಹೊಸದಿಲ್ಲಿ: ಮಹಿಳಾ ಕ್ರಿಕೆಟ್ ನ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಹಾಗೂ ಪ್ರಮುಖ ಸ್ಪಿನ್ ಬೌಲರ್ ಆರ್.ಅಶ್ವಿನ್ ಅವರನ್ನು ದೇಶದ ಉನ್ನತ ಕ್ರೀಡಾ ಗೌರವ  ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲು ಬಿಸಿಸಿಐ ನಿರ್ಧರಿಸಿದೆ.

ಅರ್ಜುನ ಪ್ರಶಸ್ತಿಗೆ ಹಿರಿಯ ಬ್ಯಾಟ್ಸ್ ಮನ್ ಶಿಖರ್ ಧವನ್, ಕೆ.ಎಲ್.ರಾಹುಲ್ ಹಾಗೂ ವೇಗದ ಬೌಲರ್ ಜಸ್ ಪ್ರೀತ್ ಬುಮ್ರಾ ಅವರ ಹೆಸರನ್ನು ಬಿಸಿಸಿಐ ಶಿಫಾರಸು ಮಾಡಿದೆ. ಧವನ್ ಅವರನ್ನು ಕಳೆದ ವರ್ಷ ಅರ್ಜುನ ಪ್ರಶಸ್ತಿಗೆ ನಿರ್ಲಕ್ಷಿಸಲಾಗಿತ್ತು.

ಅರ್ಜುನ ಪ್ರಶಸ್ತಿಗೆ ಮಹಿಳಾ ಕ್ರಿಕೆಟಿಗರನ್ನು ಶಿಫಾರಸು ಮಾಡಿಲ್ಲ. ಖೇಲ್ ರತ್ನಕ್ಕೆ ಮಿಥಾಲಿ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಕಳೆದ ವಾರ ಅಂತರ್ ರಾಷ್ಟ್ರೀಯ ಕ್ರಿಕೆಟ್ ನಲ್ಲಿ 22 ವರ್ಷಗಳನ್ನು ಪೂರೈಸಿರುವ 38ರ ವಯಸ್ಸಿನ ಮಿಥಾಲಿ ಏಕದಿನ ಕ್ರಿಕೆಟ್ ನಲ್ಲಿ 7,000ಕ್ಕೂ ಅಧಿಕ ರನ್ ಗಳಿಸಿದ್ದಾರೆ.

ಮಿಥಾಲಿ ಅವರಂತೆಯೇ ಅಶ್ವಿನ್ ಈಗಾಗಲೇ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದು, ಭಾರತ ಟೆಸ್ಟ್ ಕ್ರಿಕೆಟ್ ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಅವರು 75 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 413 ವಿಕೆಟ್ ಗಳನ್ನು ಉರುಳಿಸಿದ್ದಾರೆ. ಏಕದಿನ ಹಾಗೂ ಟ್ವೆಂಟಿ-20ಯಲ್ಲಿ 150 ಹಾಗೂ 42 ವಿಕೆಟ್ ಗಳನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News