×
Ad

ಸರಕಾರಿ ಬಸ್ ಸಂಚಾರಕ್ಕೆ ಸಿಎಫ್‌ಐ ಮನವಿ

Update: 2021-06-30 17:54 IST

ಮಂಗಳೂರು, ಜೂ. 30: ದ.ಕ. ಜಿಲ್ಲೆಯ ಹಲವು ಕಾಲೇಜುಗಳಲ್ಲಿ ಲಸಿಕಾ ಅಭಿಯಾನವು ಪ್ರಾರಂಭಗೊಂಡಿದೆ. ಆದರೆ ಗ್ರಾಮಾಂತರ ಹಾಗೂ ಒಳ ಭಾಗದಲ್ಲಿರುವ ವಿದ್ಯಾರ್ಥಿಗಳಿಗೆ ಬಸ್ಸುಗಳಿಲ್ಲದ ಕಾರಣ ಕಾಲೇಜುಗಳಿಗೆ ತೆರಳಿ ಲಸಿಕೆ ಪಡೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ದ.ಕ.ಜಿಲ್ಲೆಯ ಎಲ್ಲಾ ರೂಟ್‌ಗಳಲ್ಲಿ ಸರಕಾರಿ ಬಸ್‌ಗಳ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ದ.ಕ.ಜಿಲ್ಲಾ ಸಿಎಫ್‌ಐ ಮನವಿ ಮಾಡಿದೆ.

ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗದೆ ವಿದ್ಯಾರ್ಥಿಗಳು ಪರದಾಡಿದ್ದಾರೆ. ಅಲ್ಲದೆ ಖಾಸಗಿ ಬಸ್‌ಗಳು ಸಮಯಕ್ಕೆ ಸರಿಯಾಗಿ ಚಲಿಸುತ್ತಿಲ್ಲ. ಹಾಗಾಗಿ ಜಿಲ್ಲೆಯ ಎಲ್ಲಾ ಭಾಗಕ್ಕೂ ಸರಕಾರಿ ಬಸ್‌ಗಳ ಓಡಾಟಕ್ಕೆ ಅವಕಾಶ ಕಲ್ಪಿಸುವಂತೆ ಅಪರ ಜಿಲ್ಲಾಧಿಕಾರಿ ಹಾಗೂ ಕೆಎಸ್ಸಾರ್ಟಿಸಿ ಅಧಿಕಾರಿಗೆ ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭ ಸಿಎಫ್‌ಐ ಮಂಗಳೂರು ನಗರ ಕಾರ್ಯದರ್ಶಿ ಮುನೀರ್, ಗ್ರಾಮಾಂತರ ಕಾರ್ಯದರ್ಶಿ ಅಶ್ರಫ್ ಪೊರ್ಕೊಡಿ, ಗ್ರಾಮಾಂತರ ಕೋಶಾಧಿಕಾರಿ ಸರ್ಫ್ರಾಝ್ ಉಪಸ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News