ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್ ಹೋಲುವ ಕ್ರಿಮಿನಲ್ ರೇಖಾಚಿತ್ರ ಪ್ರಕಟಿಸಿದ ಪೊಲೀಸರು!
ಬೊಗೊಟಾ: ಕೊಲಂಬಿಯಾದ ರಾಷ್ಟ್ರೀಯ ಪೊಲೀಸರು ವಾಂಟೆಡ್ ಕ್ರಿಮಿನಲ್ ಗೆ $3 ಮಿಲಿಯನ್ ಬಹುಮಾನವನ್ನು ಘೋಷಿಸಿದ್ದು, ಕ್ರಿಮಿನಲ್ ರೇಖಾಚಿತ್ರವು ಫೇಸ್‌ಬುಕ್‌ನ ಸ್ಥಾಪಕ ಹಾಗೂ ಸಿಇಒ ಮಾರ್ಕ್ ಝುಕರ್‌ಬರ್ಗ್‌ಗೆ ವಿಲಕ್ಷಣವಾದ ಹೋಲಿಕೆಯನ್ನು ಹೊಂದಿದ್ದಾನೆ. ಇದು ಅಂತರ್ ಜಾಲದಲ್ಲಿ ಹೊಸ ಸಂಚಲನ ಮೂಡಿಸಿದೆ.
ಕೊಲಂಬಿಯಾದ ಅಧ್ಯಕ್ಷ ಇವಾನ್ ಡುಕ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಮೇಲೆ ಇಬ್ಬರು ದುಷ್ಕರ್ಮಿಗಳು ದಾಳಿ ಮಾಡಲು ಪ್ರಯತ್ನಿಸಿದ್ದಾರೆ. ಹೆಲಿಕಾಪ್ಟರ್ ಅನ್ನು ಅನೇಕ ಗುಂಡುಗಳಿಂದ ದಾಳಿ ಮಾಡಲಾಗಿತ್ತು. ಈ ದುಷ್ಕರ್ಮಿಯನ್ನು ಹಿಡಿಯಲು ಸಹಾಯವಾಗಲು, ನ್ಯಾಷನಲ್ ಪೋಲಿಸ್ ಇಬ್ಬರ ರೇಖಾಚಿತ್ರದೊಂದಿಗೆ ಫೇಸ್‌ಬುಕ್‌ನಲ್ಲಿ ವಾಂಟೆಡ್ ಮನವಿಯನ್ನು ಹೊರಡಿಸಿದ್ದರು.
ಸ್ಪ್ಯಾನಿಷ್ ಭಾಷೆಯ ಪೋಸ್ಟ್ ನಲ್ಲಿ ಈ ಇಬ್ಬರನ್ನು ಪತ್ತೆಹಚ್ಚಲು ನಮಗೆ ಸಹಾಯ ಮಾಡಿ! ಅಧ್ಯಕ್ಷ ಇವಾನ್ ಡುಕ್ ಹಾಗೂ ತಂಡವನ್ನು ಹೊತ್ತೊಯ್ಯುವ ಹೆಲಿಕಾಪ್ಟರ್ ಮೇಲೆ ದಾಳಿ ನಡೆಸಿದ್ದ ದುಷ್ಕರ್ಮಿಗಳ ಭಾವಚಿತ್ರಗಳು ಇವು. $3.000 ಮಿಲಿಯನ್ ವರೆಗೆ ಬಹುಮಾನವಿದೆ. 3213945367 ಅಥವಾ 3143587212 ಸಂಪರ್ಕಿಸಿ ಎಂದು ಬರೆಯಲಾಗಿತ್ತು.