ಅಯೋಧ್ಯೆ ಭೂ ಖರೀದಿ ವಿಚಾರ ಎರಡು ದಿನಗಳಲ್ಲಿ ಬಹಿರಂಗ: ಪೇಜಾವರ ಶ್ರೀ
Update: 2021-06-30 21:45 IST
ಉಡುಪಿ, ಜೂ.30: ಅಯೋಧ್ಯೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಖರೀದಿಸಿದ ಭೂಮಿಯ ಕುರಿತು ಇನ್ನೆರಡು ದಿನಗಳಲ್ಲಿ ಟ್ರಸ್ಟ್ ವತಿ ಯಿಂದ ಬಹಿರಂಗ ಪಡಿಸಲಾಗುವುದು ಎಂದು ಟ್ರಸ್ಟಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಬುಧವಾರ ಅಯೋಧ್ಯೆಗೆ ಭೇಟಿ ನೀಡಿರುವ ಅವರು, ಟ್ರಸ್ಟಿಗಳು ಎರಡು ಮೂರು ದಿನಗಳ ಕಾಲ ಅಯೋಧ್ಯೆಯಲ್ಲಿ ಇದ್ದು, ಭೂ ಖರೀದಿ ಕುರಿತಾಗಿ ದಾಖಲೆ ಪರಿಶೀಲನೆ ನಡೆಸಲಿದ್ದಾರೆ. ಒಂದು ಹಂತದ ಸಭೆ ಇಂದು ನಡೆದಿದ್ದು, ಎಲ್ಲಾ ಆಯಾಮಗಳಲ್ಲಿ ವಿಚಾರ ನಡೆಸಿ ವಿಚಾರಗಳನ್ನು ಬಹಿರಂಗಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪೇಜಾವರ ಸ್ವಾಮೀಜಿ ರಾಮ ಲಲ್ಲಾ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಖಜಾಂಜಿ ಗೋವಿಂದ ಗಿರಿ ಸರಸ್ವತಿ, ಟ್ರಸ್ಟಿಗಳಾದ ಅನಿಲ್ ಮಿಶ್ರಾ, ಕಾಮೇ್ವರ್ ಮೊದಲಾದವರು ಹಾಜರಿದ್ದರು.