ದ.ಕ.ಜಿಲ್ಲಾ ಕಿಸಾನ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರ ಪದಗ್ರಹಣ
ಮಂಗಳೂರು, ಜೂ.30: ದ.ಕ. ಜಿಲ್ಲಾ ಕಿಸಾನ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರ ಹಾಗೂ 16 ಬ್ಲಾಕ್ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವು ಬುಧವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ ಭೂ ಮಸೂದೆ ಕಾಯ್ದೆಯಿಂದ ಭೂಮಿ ಕಳೆದುಕೊಂಡವರಿಗೆ ಕಾಂಗ್ರೆಸ್, ಇಂದಿರಾಗಾಂಧಿ, ದೇವ ರಾಜ ಅರಸು ಅವರ ನೆನಪು ಈಗಲೂ ಇದೆ. ಆದರೆ ಭೂಮಿ ಪಡೆದು ಇಂದು ಸ್ವಾಭಿಮಾನದ ಜೀವನ ನಡೆಸುತ್ತಿರುವವರು ಕಾಂಗ್ರೆಸ್ ಪಕ್ಷವನ್ನು ಮರೆತಿದ್ದಾರೆ. ಆದಾಗ್ಯೂ ಜಿಲ್ಲೆಯಲ್ಲಿ ರೈತ ಸಂಘಟನೆಯನ್ನು ಬಲಿಷ್ಠಗೊಳಿಸಿ ರೈತರ ಸಮಸ್ಯೆಗೆ ಇನ್ನಷ್ಟು ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ದ.ಕ.ಜಿಲ್ಲಾ ಕಿಸಾನ್ ಸಮಿತಿಯ ನೂತನ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ ಮಾತನಾಡಿ ಮುಂದಿನ ದಿನಗಳಲ್ಲಿ ಜಿಲ್ಲೆಯ ಉದ್ದಗಲಕ್ಕೂ ಸಂಚರಿಸಿ ರೈತರಿಗೆ ಸರಕಾರದಿಂದ ದೊರಕುವ ಕೃಷಿ ಉಪಕರಣ, ರಸಗೊಬ್ಬರ, ಸಹಕಾರಿ ಬ್ಯಾಂಕ್‌ನಿಂದ ಸಿಗುವ ಸಾಲಸೌಲಭ್ಯ ಮತ್ತು ಸಬ್ಸಿಡಿಯನ್ನು ಒದಗಿಸುವ ಹಾಗೂ ಕೃಷಿಕರ ಮಕ್ಕಳಿಗೆ ಸರಕಾರದಿಂದ ದೊರೆಯುವ ಎಲ್ಲಾ ಯೋಜನೆಗಳನ್ನು ಒದಗಿಸಿ ಕೊಡಲು ಕಿಸಾನ್ ಘಟಕ ಬದ್ಧವಾಗಿದೆ ಎಂದರು.
ಈ ಸಂದರ್ಭ ಮಾಜಿ ಶಾಸಕರಾದ ವಸಂತ ಬಂಗೇರಾ, ಮೊಯ್ದಿನ್ ಬಾವಾ, ಪಕ್ಷದ ಮುಖಂಡರಾದ ಉಮಾನಾಥ್ ಶೆಟ್ಟಿ, ಶಾಲೆಟ್ ಪಿಂಟೊ, ಜೋಕಿಂ ಡಿಸೋಜ, ಬಿ.ಎಂ.ಅಬ್ಬಾಸ್ ಅಲಿ, ಲಾರೆನ್ಸ್ ಡಿಸೋಜ, ಸುದರ್ಶನ್ ಜೈನ್, ವೆಂಕಪ್ಪಗೌಡ, ಸುರೇಂದ್ರ ಕಂಬ್ಳಿ, ಪ್ರಶಾಂತ್ ಕಾಜವ, ಅಬ್ದುಲ್ ಸಲೀಂ, ಸದಾಶಿವ ಶೆಟ್ಟಿ, ಎಂ.ಎಸ್. ಮುಹಮ್ಮದ್, ಪಿ.ಸಿ.ಜಯರಾಮ್, ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಕಾಶ್ ಬಿ.ಸಾಲ್ಯಾನ್, ಡಾ.ರಾಜಾರಾಂ, ಪದ್ಮನಾಭ ನರಿಂಗಾನ, ಪದ್ಮ ಶೇಖರ್ ಜೈನ್, ತುಂಬೆ ಪ್ರಕಾಶ್ ಶೆಟ್ಟಿ ಮತ್ತಿರರು ಉಪಸ್ಥಿತರಿದ್ದರು.