×
Ad

​ಪೋಸ್ಟ್ ಮ್ಯಾನ್ ಗಳ ಸೇವೆ ಇಂದಿಗೂ ಮೌಲ್ಯಯುತವಾಗಿದೆ: ಪ್ರೊ.ಪ್ರಶಾಂತ್ ನಾಯ್ಕ್

Update: 2021-07-01 15:57 IST

ಕೊಣಾಜೆ : ದೈನಂದಿನ ಜೀವನದಲ್ಲಿ  ಸಂವಹನ ಬಹಳ ಮುಖ್ಯ. ಇಂದು ನಾವು ಉನ್ನತ  ಸಂವಹನ ತಂತ್ರಜ್ಞಾನಗಳನ್ನು ಹೊಂದಿರಬಹುದು. ಆದರೆ,  ಅಂಚೆ ಇಲಾಖೆಯ ನೌಕರರು  ಮುಖ್ಯವಾಗಿ  ಪೋಸ್ಟ್ ಮ್ಯಾನ್ ಗಳು ಸಲ್ಲಿಸುವ  ಸೇವೆ ಇಂದಿಗೂ  ಮೌಲ್ಯಯುತವಾಗಿದೆ. ಅಲ್ಲದೆ ಈ‌ ಕೊರೋನ ಸಂಕಷ್ಟದ‌ ನಡುವೆಯೂ‌ ಅವರ ಸೇವೆ ಶ್ಲಾಘನೀಯವಾಗಿದೆ ಎಂದು ಮಂಗಳೂರು ವಿವಿ ಪ್ರಾಧ್ಯಾಪಕ ಪ್ರೊ.ಪ್ರಶಾಂತ್ ನಾಯ್ಕ್ ಅವರು ಹೇಳಿದರು.

ಅವರು ಗುರುವಾರ ಜೆಸಿಐ  ಮಂಗಳಗಂಗೋತ್ರಿ ಕೊಣಾಜೆ ಘಟಕದ  ವತಿಯಿಂದ  ಅಸೈಗೋಳಿಯಲ್ಲಿನ ಆರ್ . ಕೆ . ಸಬಾಂಗಣದಲ್ಲಿ  ಸ್ಥಳೀಯ ಪೋಸ್ಟ್ ಮ್ಯಾನ್ ಗಳಿಗೆ 'ಸಲ್ಯೂಟ್ ದಿ ಸೈಲೆಂಟ್  ವರ್ಕರ್' ಎಂಬ ಪುರಸ್ಕಾರವನ್ನು ನೀಡಿ ಗೌರವಿಸಿ ಮಾತನಾಡಿದರು.

ಕಡಿಮೆ ವೇತನ ಪಡೆಯುತ್ತಿದ್ದರೂ ಪತ್ರಗಳನ್ನು ತ್ವರಿತ ಮತ್ತು ಸಮಯೋಚಿತವಾಗಿ ವಿಳಾಸದಾರರಿಗೆ ತಲುಪಿಸುವ ಮೂಲಕ ಅವರು  ಸಮಾಜಕ್ಕೆ ಸೇವೆ ಸಲ್ಲಿಸುತ್ತಾರೆ. ಅವರ ಸೇವೆಯನ್ನು ನಮ್ಮ ಸಮಾಜವು  ಹಿಂದಿನಿಂದಲೂ  ಗೌರವಿಸುತ್ತಾ ಬಂದಿದೆ.   ಕೊರೊನ ಸಂಕಷ್ಟ ಕಾಲದಲದಲ್ಲಿ ಅವರನನ್ನು ಗೌರವಿಸಿರುವುದು  ಅರ್ಥಪೂರ್ಣ  ಕಾರ್ಯಕ್ರಮವಾಗಿದೆ" ಎಂದು ಹೇಳಿದರು.

ಪೋಸ್ಟ್ ಮ್ಯಾನ್ ಗಳಾಗಿ ಸೇವೆ ಸಲ್ಲಿಸುತ್ತಿರುವ  ವಸಂತ ಕೆ.  ಪಾಂಡೇಶ್ವರ, ವಿಶ್ವನಾಥ ಅಂಬ್ಲಮೊಗರು, ಗಿಲ್ಬರ್ಟ್ ಅಸೈಗೋಳಿ, ಸುರೇಶ್ ಪೂಜಾರಿ ಹರೇಕಳ, ಭುಜಂಗ ಗಟ್ಟಿ ಕೊಣಾಜೆ, ಸುರೇಶ್  ಕೆ . ಬಿ . ನರಿಂಗಾನ , ಯೂಸುಫ್ ಕುತ್ತಾರ್, ಸತೀಶ್ ಕುರ್ನಾಡ್, ಹರೀಶ್ ಅಸೈಗೋಳಿ, ಪ್ರವೀಣ್ ಕುಮಾರ್ ದೇರಳಕಟ್ಟೆ ಇವರಗಳನ್ನು  ಪುರಸ್ಕರಿಸಲಾಯಿತು.

ಜೆಸಿಐ ಮಂಗಳಗಂಗೋತ್ರಿ ಕೊಣಾಜೆ ಅಧ್ಯಕ್ಷರಾದ  ಜೇಸಿ ಫ್ರಾಂಕಿ ಫ್ರಾನ್ಸಿಸ್ ಕುಟಿನಾ ಇವರು ಅಧ್ಯಕ್ಷತೆ ವಹಿಸಿ "ಕೊರೋನದ ಸಂಧಿಗ್ಧ ಪರಿಸ್ಥಿತಿ ಯಲ್ಲೂ  ತಮ್ಮ ಸೇವೆಯನ್ನು ದೇವರ ಸೇವೆ ಎಂದು ಭಾವಿಸಿ ಕರ್ತವ್ಯ ನಿರ್ವಹಿಸುತ್ತಿರುವ ಪೋಸ್ಟ್ ಮ್ಯಾನ್ ಗಳು ಅಭಿನಂದನೆಗೆ ಅರ್ಹರು"  ಎಂದರು.

ಸಮಾಜ ಸೇವಕ ಸುಧಾಕರ ಭಟ್,  ಗೌರವ ಸಲಹೆಗಾರರಾದ ಜೇಸಿ ಆನಂದ ಕೆ . ಅಸೈಗೋಳಿ, ಘಟಕದ ಕಾರ್ಯದರ್ಶಿ ಪ್ರತಿಮಾ ಹೆಬ್ಬಾರ್, ಜೇಸಿ ನಳಿನಿ,   ಪವಿತ್ರಾ ಗಣೇಶ್,  ಜುಬೈದಾ,   ವಸಂತ್ ಕುಮಾರ್ ಕೋಡಿ,  ಕುಂಜು ಬಾಬು,   ಜಯಲಕ್ಷ್ಮಿ,   ಪ್ರೀತಂ ನರೋನ,   ಆರಿಫ್ ಕಲ್ಕಟ್ಟ, ಜೇಜೆಸಿ ಅಧ್ಯಕ್ಷ  ಫಿಯೋನಾ ಪ್ರಿನ್ಸಿ ಕುಟಿನಾ ಇನ್ನಿತರರು ಉಪಸ್ಥಿತರಿದ್ದರು.

ಜೇಸಿ  ತ್ಯಾಗಂ ಹರೇಕಳ ಪ್ರಸ್ತಾವನೆಗೈದರು.  ನರಸಿಂಹಯ್ಯ ಎನ್  ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಸಂಯೋಜಕರಾದ  ಜೇಸಿ ಕಮಲಾಕ್ಷ ಶೆಟ್ಟಿಗಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News