×
Ad

ಉಡುಪಿ ; ಖಾಸಗಿ ಬಸ್ ಸಂಚಾರ ಆರಂಭ: ಪ್ರಯಾಣಿಕರಿಂದ ನೀರಸ ಪ್ರತಿಕ್ರಿಯೆ

Update: 2021-07-01 19:53 IST

ಉಡುಪಿ, ಜು.1: ಕೊರೋನ ಲಾಕ್‌ಡೌನ್‌ನಿಂದಾಗಿ ಕಳೆದ ಎರಡೂವರೆ ತಿಂಗಳಿನಿಂದ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಸಂಚಾರ ಇಂದು ಆರಂಭ ಗೊಂಡಿದ್ದು, ಕೆಲವೇ ಕೆಲವು ಬಸ್‌ಗಳು ಮಾತ್ರ ರಸ್ತೆಗೆ ಇಳಿದಿವೆ.

ಉಡುಪಿಯಿಂದ ಮಂಗಳೂರು, ಕಾರ್ಕಳ, ಕುಂದಾಪುರ, ಹೆಬ್ರಿ ಸೇರಿದಂತೆ ಇತರ ಮಾರ್ಗಗಳಲ್ಲಿ ಸುಮಾರು 50 ಬಸ್‌ಗಳು ಸಂಚರಿಸಿವೆ. ಮಂಗಳೂರಿಗೆ ವಿರಳ ಸಂಖ್ಯೆಯಲ್ಲಿ ಏಕ್ಸ್‌ಪ್ರೆಸ್‌ಗಳು ಓಡಾಟ ನಡೆಸಿದೆ. ಅದೇ ರೀತಿ 12 ಸಿಟಿ ಬಸ್‌ಗಳು ಕೂಡ ಇಂದು ಪ್ರಯಾಣ ಬೆಳೆಸಿದೆ. ಇವುಗಳಲ್ಲಿ ಪ್ರಯಾಣಿಕರ ಸಂಖ್ಯೆ ಮಾತ್ರ ಸಾಕಷ್ಟು ಕಡಿಮೆ ಇರುವುದು ಕಂಡುಬಂದಿದೆ.

ಸಂಜೆಯ ನಂತರ ಬೆಂಗಳೂರಿಗೆ 11 ಖಾಸಗಿ ಬಸ್‌ಗಳು ಸಂಚರಿಸಲಿವೆ. ನಾಳೆಯಿಂದ ಇನ್ನಷ್ಟು ವೇಗದೂತ, ಸರ್ವಿಸ್ ಹಾಗೂ ಸಿಟಿ ಬಸ್‌ಗಳು ರಸ್ತೆಗೆ ಇಳಿಯಲಿವೆ. ಮೊದಲ ದಿನ ಆಗಿರುವುದರಿಂದ ಪ್ರಯಾಣಿಕರ ಸಂಖ್ಯೆ ಸಾಕಷ್ಟು ಕಡಿಮೆ ಇತ್ತು ಎಂದು ಕೆನರಾ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ನಾಯಕ್ ಕುಯಿಲಾಡಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News