ಕೇಂದ್ರ ಸಂಪುಟದಲ್ಲಿ ಶೀಘ್ರದಲ್ಲೇ ಬದಲಾವಣೆ:ಯಾರಿಗೆ ಒಲಿಯಲಿದೆ ಸಚಿವ ಸ್ಥಾನ?

Update: 2021-07-01 15:12 GMT

ಹೊಸದಿಲ್ಲಿ: ಮುಂದಿನ ವರ್ಷ ಐದು ರಾಜ್ಯಗಳಲ್ಲಿ ಹಾಗೂ  2024 ರ ರಾಷ್ಟ್ರೀಯ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡನೇ ಅವಧಿಯಲ್ಲಿ ಮೊದಲ ಬಾರಿಗೆ ತಮ್ಮ ಸಂಪುಟವನ್ನು ಬದಲಾಯಿಸುವ ಸಾಧ್ಯತೆ ಇದೆ ಎಂದು NDTV ವರದಿ ಮಾಡಿದೆ.

ಸಂಪುಟ ಸೇರ್ಪಡೆಯಾಗುವವರಲ್ಲಿ  ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಇದ್ದಾರೆ. ಸಿಂಧಿಯಾ ಕಳೆದ ವರ್ಷ ಕಾಂಗ್ರೆಸ್ ನಿಂದ ಪಕ್ಷಾಂತರಗೊಂಡಿದ್ದರಿಂದ  ಬಿಜೆಪಿಗೆ ಮಧ್ಯಪ್ರದೇಶದಲ್ಲಿ ಸರಕಾರ ರಚಿಸಲು  ಸಾಧ್ಯವಾಗಿತ್ತು. ಅಸ್ಸಾಂನಲ್ಲಿ ಸತತ 2ನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ಪಕ್ಷದ ಮುಖ್ಯಮಂತ್ರಿ ಸ್ಥಾನವನ್ನು ಹಿಮಂತ ಬಿಸ್ವಾ ಶರ್ಮಾ ಅವರಿಗೆ ಬಿಟ್ಟುಕೊಟ್ಟಿರುವ ಸರ್ಬಾನಂದ ಸೋನೊವಾಲ್ ಸಂಪುಟ ಸೇರುವ ಸಾಧ್ಯತೆ ಇದೆ.

ಚಿರಾಗ್ ಪಾಸ್ವಾನ್‌ ವಿರುದ್ಧ ದಂಗೆಯ ನೇತೃತ್ವ ವಹಿಸಿದ್ದ ಲೋಕ ಜನಶಕ್ತಿ ಪಕ್ಷವನ್ನು (ಎಲ್‌ಜೆಪಿ) ವಿಭಜಿಸಿದ್ದ  ಚಿರಾಗ್ ಚಿಕ್ಕಪ್ಪ ಪಶುಪತಿ ಪರಾಸ್  ಗೆ  ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದ ನಂತರ ತೆರವಾಗಿದ್ದ ಸ್ಥಾನವನ್ನು ನೀಡಬಹುದು.

ಬಿಹಾರದ ನಾಯಕ ಸುಶೀಲ್ ಮೋದಿ, ಮಹಾರಾಷ್ಟ್ರದ  ನಾಯಕ ನಾರಾಯಣ್ ರಾಣೆ ಹಾಗೂ  ಭೂಪೇಂದ್ರ ಯಾದವ್ ಕೂಡ ಮೋದಿ ಸಂಪುಟಕ್ಕೆ ಸೇರುವ ಸಾಧ್ಯತೆ ಇದೆ.

ಒಂದು ತಿಂಗಳ ಅವಧಿಯ ಪರಿಶೀಲನೆಯ ನಂತರ ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಇದರಲ್ಲಿ ಪ್ರಧಾನಿ ಮೋದಿ ವಿವಿಧ ಸಚಿವಾಲಯಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸಿದ್ದಾರೆ.

ಮುಂದಿನ ವರ್ಷ ಚುನಾವಣೆ ನಡೆಯಲಿರುವ  ರಾಜಕೀಯವಾಗಿ ಮಹತ್ವದ ರಾಜ್ಯವಾಗಿರುವ  ಉತ್ತರ ಪ್ರದೇಶಕ್ಕೆಸಂಪುಟದಲ್ಲಿ  ಹೆಚ್ಚು ಆದ್ಯತೆ ಸಿಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಉತ್ತರಪ್ರದೇಶ ರಾಜ್ಯದಿಂದ ವರುಣ್ ಗಾಂಧಿ, ರಾಮ್‌ಶಂಕರ್ ಕಥೇರಿಯಾ, ಅನಿಲ್ ಜೈನ್, ರೀಟಾ ಬಹುಗುಣ ಜೋಶಿ ಹಾಗೂ  ಝಾಫರ್ ಇಸ್ಲಾಂ ಅವರು ಕ್ಯಾಬಿನೆಟ್ ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದಾರೆ ಎಂದು NDTV ವರದಿ ಮಾಡಿದೆ.

….

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News